CrimeNational

ಫೋನ್‌ ಪಕ್ಕಕ್ಕಿಡು ಎಂದಿದ್ದಕ್ಕೆ ಪೋಷಕರ ವಿರುದ್ಧವೇ ದೂರು ಕೊಟ್ಟ 21ರ ಯುವತಿ!

ಮಧ್ಯಪ್ರದೇಶ; ಪೋಷಕರು ಫೋನ್‌ ಮುಟ್ಟಬೇಡಿ.. ಎಷ್ಟೊತ್ತು ಅಂತ ಫೋನಲ್ಲೇ ಇರುತ್ತೀರಿ ಎಂದು ಬೈದಿದ್ದಾರೆ.. ಇದರಿಂದ ಆಕ್ರೋಶಗೊಂಡ 21 ವರ್ಷದ ಯುವತಿ ತನ್ನ 8 ವರ್ಷದ ಸಹೋದರನನ್ನು ಕರೆದುಕೊಂಡು ಪೊಲೀಸರಿಗೆ ಕಂಪ್ಲೇಂಟ್‌ ಕೊಟ್ಟಿದ್ದಾಳೆ.. ತನ್ನ ಪೋಷಕರ ವಿರುದ್ಧವೇ ಎಫ್‌ಐಆರ್‌ ದಾಖಲಿಸಿದ್ದಾಳೆ.. ಮಧ್ಯಪ್ರದೇಶದ ಇಂದೋರ್‌ನ ಚಂದನ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ..

ಇದನ್ನೂ ಓದಿ; ತಿರುಪತಿ ತಿಮ್ಮಪ್ಪನಿಗೆ ಭರ್ಜರಿ ಆದಾಯ; ಜುಲೈನಲ್ಲಿ 125 ಕೋಟಿ ರೂ. ಹುಂಡಿನ ಹಣ ಸಂಗ್ರಹ

2021ರ ಅಕ್ಟೋಬರ್‌ 25ರಂದು ಮಕ್ಕಳು ಪೊಲೀಸ್‌ ಠಾಣೆಯಲ್ಲಿ ಪೋಷಕರ ವಿರುದ್ಧ ದೂರು ದಾಖಲಿಸಿದ್ದರು.. ಮೊಬೈಲ್‌ ಬಳಸಿದರೆ ಅಪ್ಪ, ಅಮ್ಮ ಹೊಡೆಯುತ್ತಾರೆ. ಬೈಯ್ಯುತ್ತಾರೆ ಎಂದು ಇಬ್ಬರೂ ದೂರು ಹೇಳಿದ್ದರು.. ಪೊಲೀಸ್‌ ಬಾಲನ್ಯಾಯ ಕಾಯ್ದೆಯಡಿ ಕೇಸ್‌ ದಾಖಲು ಮಾಡಿಕೊಂಡಿದ್ದರು. ಈ ಕೇಸ್‌ ಕೋರ್ಟ್‌ನಲ್ಲಿ ನಡೆಯುತ್ತಿತ್ತು..

ಇದನ್ನೂ ಓದಿ; ಮೈಗೆ ಟವೆಲ್‌ ಸುತ್ತಿಕೊಂಡು ಬೀದಿಗಿಳಿದ ಸುಂದರಿ!; ಮುಂದೇನಾಯ್ತು..?

ಪೋಷಕರ ವಿರುದ್ಧ ಕೇಸ್‌ ದಾಖಲಾದ ಮೇಲೆ ಇಬ್ಬರೂ ಮಕ್ಕಳೂ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದಾರೆ.. ಇತ್ತ ಪೋಷಕರು ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು.. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಈ ಕೇಸ್‌ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ..

Share Post