HealthNational

ಡೆಂಘಿಗೆ ಬಲಿಯಾದ ತುಂಬು ಗರ್ಭಿಣಿ; ಹೊಟ್ಟೆಯಲ್ಲಿದ್ದ ಅವಳಿ ಮಕ್ಕಳೂ ಸಾವು!

ಹೈದರಾಬಾದ್‌; ಡೆಂಘೀ ಮಾಹಾಮಾರಿಗೆ ತುಂಬು ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದಾರೆ.. ಇದರಿಂದಾಗಿ ಆಕೆಯ ಹೊಟ್ಟೆಯಲ್ಲಿದ್ದ ಅವಳಿ ಮಕ್ಕಳು ಕೂಡಾ ಕಣ್ಣುಮುಚ್ಚಿವೆ. ತೆಲಂಗಾಣದ ಹನುಮಕೊಂಡ ಜಿಲ್ಲೆ ಸಾಯಂಪೇಟೆ ಬಳಿಯ ಗಟ್ಟಲಕಣಿಪರ್ತಿ ಎಂಬಲ್ಲಿ ಈ ಘಟನೆ ನಡೆದಿದೆ.. 29 ವರ್ಷದ ಶಿರಿಷಾ ಸಾವನ್ನಪ್ಪಿರುವ ಮಹಿಳೆ ಎಂದು ಗುರುತಿಸಲಾಗಿದೆ..

ಇದನ್ನೂ ಓದಿ; ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ!

ಇನ್ನೊಂದು ವಾರದಲ್ಲಿ ಹೆರಿಗೆಯಾಗಲಿದೆ ಎಂದು ವೈದ್ಯರು ಹೇಳಿದ್ದರು.. ಅಷ್ಟರಲ್ಲೇ ಮಹಿಳೆಗೆ ತೀವ್ರ ಜ್ವರ ಕಾಡಿದೆ.. ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಮಾಡಿಸಿದಾಗ ಅದು ಡೆಂಘೀ ಎಂದು ಗೊತ್ತಾಗಿದೆ.. ನಾಲ್ಕು ದಿನಗಳಿಂದ ಹನುಮಕೊಂಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಿರಿಷಾ ಸಾವನ್ನಪ್ಪಿದ್ದಾಳೆ.. ಪ್ಲೇಟ್‌ಲೆಟ್‌ಗಳು ಕುಸಿದಿದ್ದರಿಂದ ಶಿರಿಷಾ ಸಾವನ್ನಪ್ಪಿದ್ದಾಳೆ. ಇತ್‌ ವೈದ್ಯರು ಸಿಜೇರಿಯನ್‌ ಮಾಡಿ ಮಕ್ಕಳನ್ನು ಹೊರತೆಗೆದಿದ್ದಾರೆ.. ಆದ್ರೆ ಅಷ್ಟರಲ್ಲಾಗಲೇ ಆ ಮಕ್ಕಳೂ ಮೃತಪಟ್ಟಿವೆ..

ಇದನ್ನೂ ಓದಿ; ರಾಜ್ಯಪಾಲರ ನೋಟಿಸ್‌ ವಾಪಸ್‌ ಪಡೆಯುವಂತೆ ಒತ್ತಾಯಿಸಿ ನಿರ್ಣಯ!

ಪತಿ ಶ್ರೀಕಾಂತ್ ಪತ್ನಿ ಹಾಗೂ ಅವಳಿ ಮಕ್ಕಳ ನಿಧನಕ್ಕೆ ತೀವ್ರವಾಗಿ ಅಳಲು ತೋಡಿಕೊಂಡರು. ಕೆಲ ವರ್ಷಗಳ ಹಿಂದೆ ಶ್ರೀಕಾಂತ್ ಮೊದಲ ಪತ್ನಿ‌ ಕೂಡಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗಿ ಗ್ರಾಮದಲ್ಲಿ ಮೊದಲ ಪತ್ನಿಯ ಹೆಸರಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. 2021 ರಲ್ಲಿ ಅವರ ಸಹೋದರಿ ಶಿರಿಷಾಳನ್ನು ಎರಡನೇ ಮದುವೆಯಾದರು. ಈಗ ಆಕೆಯೂ ತುಂಬು ಗರ್ಭಿಣಿಯಾಗಿರುವಾಗಲೇ ಮೃತಪಟ್ಟಿದ್ದಾಳೆ.

Share Post