ಕಿಡ್ನಿ ಸಮಸ್ಯೆ ಇದ್ದರೆ ಮೊದಲೇ ತಿಳಿಯವುದು ಹೇಗೆ..?
ಕಿಡ್ನಿಗಳು ನಮ್ಮ ದೇಹದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.. ದೇಹದಲ್ಲಿ ಕಿಡ್ನಿಗಳು ರಕ್ತ ಶುದ್ಧೀಕರಣ ಮಾಡಿ ಕಲ್ಮಶಗಳನ್ನು ಹೊರಹಾಕುತ್ತವೆ.. ಆದ್ರೆ, ನಮ್ಮ ಆಹಾರ ಪದ್ಧತಿ ಸೇರಿದಂತೆ ವಿವಿಧ ಕಾರಣಗಳಿಂದ ಕಿಡ್ನಿಗಳು ಹಾಳಾಗುತ್ತವೆ.. ಕಿಡ್ನಿ ಸಮಸ್ಯೆ ಉಂಟಾಗುತ್ತಿದೆ ಎಂದು ಮೊದಲೇ ನಾವು ಅರಿತರೆ ಅದಕ್ಕೆ ಚಿಕಿತ್ಸೆ ಪಡೆಯಬಹುದು.. ಹಾಗಾದರೆ ಕಿಡ್ನಿ ಸಮಸ್ಯೆಯ ಸಂಕೇತಗಳೇನು ನೋಡೋಣ ಬನ್ನಿ..
1. ಕಾಲು, ಮುಖದ ಊತ
ಕಿಡ್ನಿ ಸಮಸ್ಯೆಯಲ್ಲಿದ್ದರೆ ಕಾಲುಗಳು ಹಾಗೂ ಮುಖದಲ್ಲಿ ಊತ ಕಂಡು ಬರುತ್ತದೆ.. ದೇಹದ ಇತರ ಭಾಗಗಳಲ್ಲೂ ಊತ ಕಾಣಿಸಿಕೊಳ್ಳುತ್ತದೆ..
2. ಚಿಕ್ಕ ವಯಸ್ಸಿನಲ್ಲಿ ಅಧಿಕ ಬಿಪಿ;
ಚಿಕ್ಕ ವಯಸ್ಸಿನಲ್ಲೇ ಅಧಿಕ ರಕ್ತದೊತ್ತಡವು ಕೂಡಾ ಮೂತ್ರಪಿಂಡದ ಸಮಸ್ಯೆಗಳ ಸಂಕೇತವಾಗಿರಬಹುದು. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ.
3. ಹೆಚ್ಚು ಬಾರಿ ಮೂತ್ರ ವಿಸರ್ಜಿಸುವುದು;
ಮೂತ್ರ ವಿಸರ್ಜಿಸಲು ರಾತ್ರಿಯಲ್ಲಿ ಆಗಾಗ ಏಳುವುದು. ಪದೇ ಪದೇ ರಾತ್ರಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದು ಕೂಡಾ ಕಿಡ್ನಿಕಾರ್ಯ ಸರಿಯಾಗಿ ಮಾಡುತ್ತಿಲ್ಲ ಎಂಬುದನ್ನು ತೋರಿಸುವ ಸಂಕೇತವಾಗಿದೆ.
4. ಮೂತ್ರದಲ್ಲಿ ರಕ್ತ ಅಥವಾ ಕಾಫಿ ಬಣ್ಣ;
ಮೂತ್ರದಲ್ಲಿ ರಕ್ತ ಅಥವಾ ಕಾಫಿ ಬಣ್ಣ ಬರುವುದು ಕೂಡಾ ಮೂತ್ರಪಿಂಡದ ಸಮಸ್ಯೆಗಳ ಸಂಕೇತವಾಗಿದೆ. ಮೂತ್ರದ ಕಲರ್ ನೋಡಿ ಅನುಮಾನ ಬಂದರೆ ವೈದ್ಯರಲ್ಲಿ ತೋರಿಸುವುದು ಒಳ್ಳೆಯದು
5. ದ್ರವದ ಧಾರಣದಿಂದಾಗಿ ಉಸಿರಾಟದ ತೊಂದರೆಗಳು;
ಮೂತ್ರಪಿಂಡದ ಕಾರ್ಯವು ಕಡಿಮೆಯಾದಾಗ ದೇಹದಲ್ಲಿ ದ್ರವದ ಧಾರಣವು ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ. ಉಸಿರಾಟದ ತೊಂದರೆ ಹೆಚ್ಚಾಗುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸುವುದು ಒಳ್ಳೆಯದು.
6. ವಾಂತಿ, ಅನ್ನದ ಅಸಹಿಷ್ಣುತೆ, ದೇಹ ತುರಿಕೆ;
ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದಲ್ಲಿ ವಿಷಕಾರಿ ಅಂಶಗಳು ಸೇರಿಕೊಂಡು ವಾಂತಿ, ಅನ್ನ ತಿನ್ನಲು ತೊಂದರೆ, ದೇಹದ ತುರಿಕೆ ಸಾಮಾನ್ಯ. ಮೇಲಿನ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮೂತ್ರಪಿಂಡದ ಆರೋಗ್ಯದ ನಿಯಮಿತ ಮೇಲ್ವಿಚಾರಣೆ, ಸೂಕ್ತ ಪರೀಕ್ಷೆಗಳು, ಮೂತ್ರಪಿಂಡದ ಕಾಯಿಲೆಗಳನ್ನು ಆರಂಭಿಕ ಪತ್ತೆ ಮತ್ತು ಸರಿಯಾದ ಚಿಕಿತ್ಸೆಯು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.