HealthLifestyle

ನೀವು ಚಿಕನ್‌ ಲಿವರ್‌ ಪ್ರಿಯರಾ..?; ಹಾಗಾದ್ರೆ ಈ ವರದಿ ಓದಲೇಬೇಕು..

ನಮ್ಮ ಸಮಾಜದಲ್ಲಿ ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳೇ ಹೆಚ್ಚಾಗಿದ್ದಾರೆ.. ಬಹುತೇಕ ಜನರೂ ಪ್ರತಿ ದಿನವೂ ಊಟದಲ್ಲಿ ಮಾಂಸಾಹಾರ ಇದ್ದರೆ ಒಳ್ಳೆಯದು ಎಂದು ಬಯಸುವವರು ಇದ್ದಾರೆ.. ಅದ್ರಲ್ಲೂ ಮಾಂಸಾಹಾರದಲ್ಲಿ ತರಹೇವಾರಿ ಮಾಂಸಾಹಾರಗಳು ಇಷ್ಟಪಡುತ್ತಾರೆ.. ಕೆಲವರಿಗೆ ಕೋಳಿ ಮಾಂಸ ತುಂಬಾ ಇಷ್ಟವಾದರೆ, ಇನ್ನು ಕೆಲವರಿಗೆ ಕುರಿ ಮಾಂಸ ಇಷ್ಟವಾಗುತ್ತದೆ.. ಕೆಲವರಿಗೆ ಬೋಟಿ ಇಷ್ಟವಾದರೆ, ಇನ್ನು ಕೆಲವರಿಗೆ ಲಿವರ್‌ ಇಷ್ಟವಾಗುತ್ತದೆ.. ಇನ್ನು ಕೆಲವರು ತಲೆಮಾಂಸದ ಪ್ರಿಯರು..

ಇದನ್ನೂ ಓದಿ; ಮೂತ್ರ ಕುಡಿಸಿ, ಭೀಕರವಾಗಿ ಥಳಿಸಿ ಪ್ರಿಯಕರನ ಕೊಲೆ ಮಾಡಿದ ಯುವತಿ!

ಅಂದಹಾಗೆ, ಮಾಂಸಾಹಾರಗಳಲ್ಲಿ ಜನ ಹೆಚ್ಚಾಗಿ ತಿನ್ನೋದು ಚಿಕನ್‌.. ಚಿಕನ್‌ ಕಡಿಮೆ ಬೆಲೆಗೂ ಸಿಗುತ್ತದೆ, ಜೊತೆಗೆ ಬೇರೆ ಮಾಂಸಕ್ಕೆ ಹೋಲಿಸಿದರೆ ಬೇಗ ಜೀರ್ಣವಾಗುತ್ತದೆ.. ಜೊತೆಗೆ ಇದ್ರಲ್ಲಿ ಪ್ರೋಟೀನ್‌ ಹೆಚ್ಚಾಗಿರುವುದರಿಂದ ಆಗಾಗ ಚಿಕನ್‌ ಸೇವನೆ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.. ಅದ್ರಲ್ಲೂ ಕೂಡಾ  ಚಿಕನ್ ಲಿವರ್ ತಿನ್ನುವುದರಿಂದ ಚಿಕನ್ ಗಿಂತ ಹೆಚ್ಚಿನ ಆರೋಗ್ಯ ಪ್ರಯೋಜನಗಳಿವೆಯಂತೆ…

ಇದನ್ನೂ ಓದಿ; ನದಿಗೆ ಹಾರಿದ ಪತ್ನಿ; ರಕ್ಷಿಸಲು ಹೋದ ಗಂಡ, ಸಂಬಂಧಿಕ ಸಾವು.. ಆಕೆ?

ಹಲವಾರು ಮಂದಿ ಹೋಟೆಲ್‌ಗೆ ಹೋದಾಗ ಚಿಕನ್‌ ಲಿವರ್‌ ಇದೆಯಾ ಎಂದು ಕೇಳುತ್ತಿರುತ್ತಾರೆ.. ಇದ್ದರೆ ಇಷ್ಟಪಟ್ಟು ತರಿಸಿಕೊಂಡು ತಿನ್ನುತ್ತಿರುತ್ತಾರೆ.. ಹಾಗೆ ಚಿಕನ್‌ ಲಿವರ್‌ ತಿನ್ನುವವರಿಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆಯಂತೆ..  ಕೋಳಿ ಲಿವರ್‌ನಲ್ಲಿ ವಿಟಮಿನ್ ಎ, ಬಿ,  ವಿಟಮಿನ್ ಬಿ 12, ಪ್ರೋಟೀನ್‌ಗಳು, ಖನಿಜಗಳು, ಕಬ್ಬಿಣದ ಅಂಶ, ಫೋಲೇಟ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆಯಂತೆ. ಇದು ಹೆಚ್ಚಿನ ಪ್ರಮಾಣದ ಸೆಲೆನಿಯಮ್ ಹೊಂದಿದ್ದು, ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ..

ಇದನ್ನೂ ಓದಿ; ಮದುವೆ ಮುರಿದುಬಿದ್ದಿದ್ದಕ್ಕೆ ಗಾಂಜಾ ಅಸ್ತ್ರ ಪ್ರಯೋಗಿಸಿದ ಎಂಜಿನಿಯರ್‌!

ಚಿಕನ್ ಲಿವರ್‌ ಸೇವನೆ ಮಾಡುವುದರಿಂದ ದೃಷ್ಟಿದೋಷ, ಚರ್ಮ ಮತ್ತು ರಕ್ತಹೀನತೆಯ ಸಮಸ್ಯೆ ನಿವಾರಣೆಯಾಗುತ್ತೆ ಎಂದು ಹೇಳಲಾಗುತ್ತೆ.. ಚಿಕನ್ ಲಿವರ್ ಕಬ್ಬಿಣ ಮತ್ತು ವಿಟಮಿನ್ ಬಿ 12 ನಲ್ಲಿ ಸಮೃದ್ಧವಾಗಿದೆ, ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.  ಚಿಕನ್ ಲಿವರ್ ನಲ್ಲಿ ವಿಟಮಿನ್ ಕೆ ಕೂಡಾ ಇದ್ದು, ಇದು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ತಿನ್ನುವುದರಿಂದ ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುವುದಲ್ಲದೆ, ಹೃದಯದ ಆರೋಗ್ಯವನ್ನೂ ಕಾಪಾಡಬಹುದು..
ಚಿಕನ್ ಲಿವರ್ ನಲ್ಲಿರುವ ವಿಟಮಿನ್ ಬಿ 12ನಿಂದ ನಮ್ಮ ನರಮಂಡಲಕ್ಕೆ ಚೈತನ್ಯ ಸಿಗುತ್ತದೆ.. ಜ್ಞಾಪಕಶಕ್ತಿ, ಖಿನ್ನತೆ, ಗೊಂದಲ, ಕಿರಿಕಿರಿಯಂತಹ ಮಾನಸಿಕ ಸಮಸ್ಯೆ ಇರುವವರಿಗೆ ಇದು ಉತ್ತಮ ಆಹಾರ ಎಂದು ತಿಳಿದುಬಂದಿದೆ. ಮಧುಮೇಹ ರೋಗಿಗಳು ಚಿಕನ್ ಲಿವರ್ ಸೇವಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ..

ಇದನ್ನೂ ಓದಿ; ಮೂತ್ರ ಕುಡಿಸಿ, ಭೀಕರವಾಗಿ ಥಳಿಸಿ ಪ್ರಿಯಕರನ ಕೊಲೆ ಮಾಡಿದ ಯುವತಿ!

Share Post