ಪ್ಯಾರಿಸ್ ಒಲಿಂಪಿಕ್ಸ್; ಭಾರತಕ್ಕೆ ಮತ್ತೊಂದು ಪದಕದ ಗರಿ!
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮನು ಭಾಕರ್ ಇತಿಹಾಸ ನಿರ್ಮಿಸಿದ್ದಾರೆ. ಆಕೆಯ ಪಿಸ್ತೂಲಿನಿಂದ ಹಾರಿದ ಬುಲೆಟ್ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದೆ. ಇದರೊಂದಿಗೆ ಭಾರತ ಗಳಿಸಿದ ಪದಕಗಳ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನು ಭಾಕರ್ ತನ್ನ ಜೊತೆಗಾರ ಸರಬ್ಜೋತ್ ಸಿಂಗ್ ಜೊತೆಗೂಡಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯ ಕಂಚಿನ ಪದಕಕ್ಕಾಗಿ ಮನು-ಸರಬ್ಜೋತ್ ಕೊರಿಯಾ ಜೋಡಿಯನ್ನು 16-10 ರಿಂದ ಸೋಲಿಸಿದರು.
ಇದನ್ನೂ ಓದಿ; ನಿಮ್ಮ ಗ್ರಹಿಕೆಗೊಂದು ಚಾಲೆಂಜ್; ಈ ಚಿತ್ರದಲ್ಲಿ ಎರಡು ಕುದುರೆ ಇದೆ, ಗುರುತಿಸಿ..
ಇದಕ್ಕೂ ಮೊದಲು ಜುಲೈ 28 ರಂದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಮನು ಪ್ಯಾರಿಸ್ನಲ್ಲಿ ಚೊಚ್ಚಲ ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ಭಾರತದ ಖಾತೆ ತೆರೆದರು. ಪ್ಯಾರಿಸ್ನಲ್ಲಿ ಚೊಚ್ಚಲ ಗೆಲುವಿನ 48 ಗಂಟೆಗಳ ನಂತರ ಮನು ಭಾಕರ್ ಮತ್ತೊಂದು ಕಂಚು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ; 20 ಸೆಕೆಂಡ್ HUG ಮಾಡಿದರೆ ಹಲವಾರು ಆರೋಗ್ಯ ಪ್ರಯೋಜನಗಳು!