DistrictsHealth

ಗೊತ್ತಿಲ್ಲದ ವಿಷದ ಹಣ್ಣು ತಿಂದು ಹಿರಿಯೂರಿನ 6 ಮಕ್ಕಳು ಅಸ್ವಸ್ಥ!

ಚಿತ್ರದುರ್ಗ; ಮಕ್ಕಳಿಗೆ ಎಲ್ಲಾದರೂ ಏನಾದರೂ ಹಣ್ಣು ಕಾಣಿಸಿದರೆ ಅದನ್ನು ಕಿತ್ತು ತಿನ್ನುವ ತವಕ.. ಅದು ತಿನ್ನಬಹುದಾದ ಹಣ್ಣಾ ಅಲ್ವಾ ಎಂಬುದೂ ಗೊತ್ತಿಲ್ಲದೆ ತಿನ್ನಲು ಮುಂದಾಗುತ್ತಾರೆ.. ಹಣ್ಣುಗಳ ಬಗ್ಗೆ ಪೋಷಕರು ಸರಿಯಾಗಿ ತಿಳವಳಿ ನೀಡಿದೇ ಹೋದರೆ ಇಂತಹ ಸಮಯದಲ್ಲಿ ಅವಾಂತರಗಳಾಗುತ್ತವೆ.. ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲಿ ತಿನ್ನುವ ಹಣ್ಣೆಂದು ನಂಬಿ ವಿಷಕಾರಿ ಹಣ್ಣುಗಳನ್ನು ತಿಂದು 6 ಮಕ್ಕಳು ಅಸ್ವಸ್ಥರಾಗಿದ್ದಾರೆ..

ಇದನ್ನೂ ಓದಿ; ರೀಲ್ಸ್‌ ಮಾಡುವಾಗ ದುರಂತ; 300 ಅಡಿ ಫಾಲ್ಸ್‌ಗೆ ಬಿದ್ದು ಯುವತಿ ಸಾವು!

ಹಿರಿಯೂರು ತಾಲ್ಲೂಕಿನ ಅಂಬಲಗೆರೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು.. ಈ ವೇಳೆ ಬೇಲಿಯೊಂದರ ನಡುವೆ ಗಿಡವೊಂದರಲ್ಲಿ ವಿಪರೀತ ಹಣ್ಣುಗಳಿರುವುದು ಕಂಡುಬಂದಿದೆ.. ಇವು ತಿನ್ನುವ ಹಣ್ಣುಗಳೇ ಇರಬಹುದು ಎಂದು ಅವುಗಳನ್ನು ಕಿತ್ತು ತಿಂದಿದ್ದಾರೆ.. ಎಲ್ಲರೂ ಹಣ್ಣುಗಳನ್ನು ಹಂಚಿಕೊಂಡು ತಿಂದಿದ್ದಾರೆ..

ಇದನ್ನೂ ಓದಿ; ಮಹಿಳೆಯರ ಹೆಸರಿನಲ್ಲಿ ಹೂಡಿಕೆ ಮಾಡೋದಕ್ಕೆ ಇದಕ್ಕಿಂತ ಉತ್ತಮ ಯೋಜನೆ ಇಲ್ಲ!

ಈ ಹಣ್ಣುಗಳನ್ನು ತಿಂದ ಕೆಲ ಹೊತ್ತಿನ ನಂತರ ಮಕ್ಕಳಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದೆ.. ತೀವ್ರ ಹೊಟ್ಟೆನೋವಿನಿಂದ ಒದ್ದಾಡಿದ್ದಾರೆ.. ವಿಷಯ ಗೊತ್ತಾಗುತ್ತಿದ್ದಂತೆ ಪೋಷಕರು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.. ಸದ್ಯ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದೇ ಸಮಾಧಾನದ ವಿಷಯ.

Share Post