ಡೆತ್ ನೋಟ್ ಬರೆದ ತೆಲುಗು ನಟ ರಾಜ್ ತರುಣ್ ಪ್ರೇಯಸಿ!; ಮುಂದೇನಾಯ್ತು..?
ಹೈದರಾಬಾದ್; ತೆಲುಗು ಸಿನಿಮಾ ರಂಗದ ಜನಪ್ರಿಯ ಯುವ ನಟ ರಾಜ್ ತರುಣ್ ಅವರ ಪ್ರೇಮ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು,ರಾಜ್ ತರುಣ್ ಪ್ರಿಯತಮೆ ಆತ್ಮಹತ್ಯೆ ಯತ್ನ ಮಾಡಿದ್ದಾಳೆ.. ರಾಜ್ ತರುಣ್ ನನಗೆ ಮೋಸ ಮಾಡಿದ್ದಾನೆ ಎಂದು ಲಾವಣ್ಯ ಪ್ರಕರಣ ದಾಖಲಿಸಿದ್ದಳು.. ಆದ್ರೆ ಇದೇ ಲಾವಣ್ಯ ಕಳೆದ ರಾತ್ರಿ (ಶುಕ್ರವಾರ) ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ತನ್ನ ಲಾಯರ್ಗೆ ಲಾವಣ್ಯ ಮೆಸೇಜ್ ಕಳುಹಿಸಿದ್ದು, ‘ರಾಜ್ ಇಲ್ಲದ ಜೀವನದಲ್ಲಿ ನಾನು ಬದುಕಲಾರೆ.. ಇಹಲೋಕ ತ್ಯಜಿಸುತ್ತಿದ್ದೇನೆ’ ಎಂಬ ಮಾಹಿತಿ ಅದರಲ್ಲಿತ್ತು.. ಕೂಡಲೇ ಎಚ್ಚೆತ್ತ ವಕೀಲ 112ಗೆ ಕರೆ ಮಾಡಿ ನರಸಿಂಗಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.. ಕೂಡಲೇ ಮಧ್ಯರಾತ್ರಿ ಪೊಲೀಸರು ಲಾವಣ್ಯ ಅವರ ಮನೆಗೆ ತೆರಳಿ ಆಕೆಗೆ ಕೌನ್ಸೆಲಿಂಗ್ ಕೊಟ್ಟು ಆತ್ಮಹತ್ಯೆಯನ್ನು ತಡೆದಿದ್ದಾರೆ..
ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ, ಹೀಗಾಗಿ ನನ್ನ ಬದುಕು ಕೊನೆಗೊಳಿಸಲು ನಿರ್ಧಾರ ಮಾಡಿದ್ದೇನೆ ಎಂದು ಆಕೆ ಹೇಳಿದ್ದಳು.. ಆದ್ರೆ ಪೊಲೀಸರು ಆಕೆಗೆ ತಿಳಿ ಹೇಳಿ, ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಿದ್ದಾರೆ.. ನಟ ರಾಜ್ ತರುಣ್, ಲಾವಣ್ಯಳನ್ನು ಮದುವೆಯಾಗುತ್ತೇನೆಂದು ಹೇಳಿ, ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ..