ನೆಲದ ಮೇಲೆ ಕೂತು ತಿನ್ನುವುದೇ ಒಂದು ಯೋಗಾಸನ!; ಹೀಗೆ ತಿಂದರೆ ಈ ಕಾಯಿಲೆಗಳೆಲ್ಲಾ ಮಾಯ!
ಬೆಂಗಳೂರು; ದಶಕಗಳ ಹಿಂದೆ ಎಲ್ಲರೂ ಕೂಡಾ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು.. ಸಭೆ. ಸಮಾರಂಭಗಳಲ್ಲೂ ಕೂಡಾ ನೆಲದ ಮೇಲೆಯೇ ಊಟ ಬಡಿಸಲಾಗುತ್ತಿತ್ತು.. ಆದ್ರೆ ಇತ್ತೀಚಿನ ದಿನಗಳಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವವರ ಸಂಖ್ಯೆಯೇ ಕಡಿಮೆಯಾಗಿಬಿಟ್ಟಿದೆ.. ಎಲ್ಲರೂ ಕೂಡಾ ಚೇರ್ ಮೇಲೆ ಕುಳಿತು ಊಟ ಮಾಡುತ್ತಾರೆ.. ಎಲ್ಲರ ಮನೆಗಳಿಗೂ ಡೈನಿಂಗ್ ಟೇಬಲ್ಗಳು ಬಂದುಬಿಟ್ಟಿವೆ.. ಆದ್ರೆ ತಜ್ಞರ ಪ್ರಕಾರ ನೆಲದ ಮೇಲೆ ಕಾಲು ಮಡಚಿ ಊಟ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆಯಂತೆ.. ನೆಲದ ಮೇಲೆ ಕುಳಿತು ಊಟ ಮಾಡುವುದನ್ನು ರೂಢಿಸಿಕೊಂಡವರು ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಾರಂತೆ..!
ನಾವು ಯೋಗಾ ಮಾಡುತ್ತೇವೆ.. ಯೋಗಾದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ವಿಜ್ಞಾನ ಕೂಡಾ ಕೂಡಾ ಹೇಳುತ್ತದೆ.. ನಿಜ ಹೇಳಬೇಕು ಅಂದ್ರೆ ನೆಲದ ಮೇಲೆ ಕುಳಿತು ಊಟ ಮಾಡುವುದು ಕೂಡಾ ಒಂದು ಯೋಗಾಸನದಂತೆಯೇ.. ಕಾಲುಗಳನ್ನು ಮಡಚಿ ಕುಳಿತುಕೊಳ್ಳುವುದನ್ನು ಸುಖಾಸನ ಎಂದು ಕರೆಯುತ್ತಾರೆ. ಹೀಗೆ ಕುಳಿತುಕೊಳ್ಳುವುದರಿಂದ ನಮಗೆ ಜೀರ್ಣಶಕ್ತಿ ಚೆನ್ನಾಗಿ ಆಗುತ್ತದೆ.. ಇದಲ್ಲದೆ, ಈ ಭಂಗಿಯು ನೈಸರ್ಗಿಕವಾಗಿ ಕಿಬ್ಬೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಸುಖಾಸನದಲ್ಲಿ ಕುಳಿತುಕೊಳ್ಳುವುದರಿಂದ ನರಗಳು ಸಕ್ರಿಯವಾಗಿ ಕೆಲಸ ಮಾಡುತ್ತವೆ. ಇದು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ನಿಯಂತ್ರಿಸಲಿದ್ದು, ಈ ರೀತಿ ಕುಳಿತು ಊಟ ಮಾಡುವುದರಿಂದ ಶಾಂತಿ ಮತ್ತು ವಿಶ್ರಾಂತಿ ಸಿಗುತ್ತದೆ. ಜೊತೆಗೆ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ನೆಲದ ಮೇಲೆ ಕುಳಿತು ತಿನ್ನುವುದು ತುಂಬಾ ಒಳ್ಳೆಯದು.
ಕುಳಿತು ತಿನ್ನುವುದರಿಂದ ಹೊಟ್ಟೆಯ ಮೇಲೆ ಒತ್ತಡ ಬೀಳುತ್ತದೆ.. ಇದರಿಂದಾಗಿ ನಮಗೆ ಎಷ್ಟು ಬೇಕೋ ಅಷ್ಟನ್ನು ತಿನ್ನುತ್ತೇವೆ.. ಇದರಿಂದಾಗಿ ಹೆವಿ ಊಟ ಮಾಡುವುದನ್ನು ಕಡಿಮೆ ಮಾಡುತ್ತೇವೆ.. ಹೀಗಾಗಿ ತೂಕ ಹೆಚ್ಚಾಗುವುದಿಲ್ಲ.. ಜೊತೆಗೆ ನೆಲದ ಮೇಲಿನ ಊಟ ತೃಪ್ತ ಭಾವನೆಯನ್ನು ಮೂಡಿಸುತ್ತದೆ..