HealthNational

ಹೆಗಲ ಮೇಲೇ ಸಾವನ್ನಪ್ಪಿದ ಸಹೋದರಿ; 5 ಕಿಮೀ ಹಾಗೇ ಸಾಗಿದ ಸಹೋದರ!

ಲಿಖಿಂಪುರ್‌ ಖೇರಿ; ಸಹೋದರಿಗೆ ಟೈಫಾಯ್ಡ್‌ ಆಗಿದ್ದು, ಆಸ್ಪತ್ರೆಗೆ ತೋರಿಸಲು ಸಹೋದರ ಹೆಗಲ ಮೇಲೆ ಹೊತ್ತುಕೊಂಡು ಹೋಗುವಾಗಲೇ ಆಕೆ ಸಾವನ್ನಪ್ಪಿದ್ದಾಳೆ.. ಇದರಿಂದಾಗಿ ಸಹೋದರ ಸುಮಾರು ಐದು ಕಿಲೋಮೀಟರ್‌ವರೆಗೂ ತಂಗಿ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡೇ ಸಾಗಿದ್ದಾನೆ.. ಉತ್ತರ ಪ್ರದೇಶದ ಲಿಖಿಂಪುರ ಖೇರಿ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ..
ಶಿವಾನಿ ಎಂಬ ಬಾಲಕಿ ತೀವ್ರ ಜ್ವರದಿಂದ ಬಳಲುತ್ತಿದ್ದಳು.. ಆದ್ರೆ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದ್ದರಿಂದ ವಾಹನಗಳು ಓಡಾಡುವುದಕ್ಕೆ ಆಗುತ್ತಿರಲಿಲ್ಲ.. ಹೀಗಾಗಿ ಸಹೋದರ ಹೆಗಲ ಮೇಲೆ ಹೊತ್ತುಕೊಂಡು ನಗರದ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ.. ಆದ್ರೆ ತೀವ್ರ ಅಸ್ವಸ್ಥಳಾಗಿದ್ದ ಶಿವಾನಿ ಅಣ್ಣದ ಹೆಗಲ ಮೇಲೆಯೇ ಸಾವನ್ನಪ್ಪಿದ್ದಾಳೆ..

Share Post