ಗಂಡ ಕಪ್ಪಾಗಿದ್ದಾನೆ ಎಂದು ಪ್ರಿಯಕರನ ಜೊತೆ ಎಸ್ಕೇಪ್; ಒಂದು ತಿಂಗಳ ಮಗು ಅನಾಥ!
ಗ್ವಾಲಿಯರ್; ಗಂಡ ಕಪ್ಪಾಗಿದ್ದಾನೆಂದು ಒಂದು ತಿಂಗಳ ಮಗುವನ್ನು ಅನಾಥವಾಗಿ ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ.. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಘಟನೆ ನಡೆದಿದೆ.. ವಿಶಾಲ್ ಮೋಗಿಯಾ ಎಂಬುವವರು ಎಂಬುವವರು ರಾಖಿ ಎಂಬಾಕೆಯನ್ನು ಮದುವೆಯಾಗಿದ್ದ.. ಆದ್ರೆ ರಾಖಿ ಒಂದು ಮಗು ಆದ ಮೇಲೆ ಗಂಡನ ಮೇಲೆ ಆಸಕ್ತಿ ಕಳೆದುಕೊಂಡಿದ್ದಾಳೆ.. ಗಂಡ ಕಪ್ಪಗಿದ್ದಾನೆ ಎಂದು ಗಂಡನನ್ನು ತೊರೆದಿದ್ದಾಳೆ.. ಜೊತೆಗೆ ಒಂದು ತಿಂಗಳ ಮಗುವನ್ನೂ ಬಿಟ್ಟುಹೋಗಿದ್ದಾಳೆ.
ಇದನ್ನೂ ಓದಿ; ಮೂತ್ರ ವಿಸರ್ಜನೆ ಮಾಡುವಾಗ ಪ್ರವಹಿಸಿದ ವಿದ್ಯುತ್; ಯುವಕ ಸಾವು!
ಇದೀಗ ರಾಖಿ ಗಂಡನಿಗೆ ಡಿವೋರ್ಸ್ ಕೊಟ್ಟು, ಪ್ರಿಯಕರನ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾಳೆ.. ರಾಖಿ ನಾನು ಕಪ್ಪಗಿದ್ದೇನೆ ಎಂದು ದಿನವೂ ಅಣಕಿಸುತ್ತಿದ್ದಳು.. ವಿನಾಕಾರಣ ಕ್ಯಾತೆ ತೆಗೆದು ಬಿಟ್ಟುಹೋಗಿದ್ದಾಳೆ ಎಂದು ಗಂಡ ವಿಶಾಲ್ ಗೋಳು ತೋಡಿಕೊಂಡಿದ್ದಾನೆ..
ಇದನ್ನೂ ಓದಿ; ತಿರುಪತಿಗೆ ಹೊರಟಿದ್ದ ಬಸ್ ಭೀಕರ ಅಪಘಾತ; 9 ಮಂದಿ ದುರ್ಮರಣ!