CrimeDistricts

110 ರೂಪಾಯಿಗೆ 300 ಎಂಎಲ್‌ ಪೆಟ್ರೋಲ್‌!; ತುಮಕೂರಿನಲ್ಲಿ ನಡೆತಿದೆಯಾ ಮೋಸದ ದಂಧೆ..?

ತುಮಕೂರು; 110 ರೂಪಾಯಿಗೆ ಪೆಟ್ರೋಲ್‌ ಹಾಕಿ ಎಂದರೆ ಬರೀ 300 ಎಂಎಲ್‌ ಪೆಟ್ರೋಲ್‌ ಹಾಕಿ ಮೋಸ ಮಾಡಿದ್ದಾರೆ ಎಂದು ತುಮಕೂರಿನ ಗ್ರಾಹಕರೊಬ್ಬರು ಆರೋಪ ಮಾಡಿದ್ದಾರೆ.. ತುಮಕೂರಿನ ಕುಣಿಗಲ್‌ ರಸ್ತೆಯ ಪೆಟ್ರೋಲ್‌ ಬಂಕ್‌ ಒಂದರಲ್ಲಿ 110 ರೂಪಾಯಿಗೆ ಪೆಟ್ರೋಕ್‌ ಹಾಕಿಸಿದ್ದೇನೆ.. ಆದ್ರೆ 300 ಎಂಎಲ್‌ ಮಾತ್ರ ಹಾಕಲಾಗಿದೆ.. ಬಿಲ್‌ ತೆಗೆಸಿದಾಗ ಇದು ಬಯಲಾಗಿದೆ ಎಂದು ದ್ವಿಚಕ್ರ ವಾಹನ ಸವಾರರೊಬ್ಬರು ಹೇಳಿದ್ದಾರೆ..

ಇದನ್ನೂ ಓದಿ; ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಮೂಡಾ ಹಗರಣ..?; ಪಾದಯಾತ್ರೆಗೆ ರಾಜ್ಯ ಬಿಜೆಪಿ ಸಿದ್ಧತೆ..!

ಇನ್ನು ಪೆಟ್ರೋಲ್‌ ಬಂಕ್‌ನಲ್ಲಿ ನಾರ್ಮಲ್‌ ಪೆಟ್ರೋಲ್‌ ಇದ್ದರೂ ಇಲ್ಲ ಎಂದು ಹೇಳಿ ಪವರ್‌ ಪೆಟ್ರೋಲ್‌ ಹಾಕುತ್ತಾರೆ.. ಪವರ್‌ ಪೆಟ್ರೋಲ್‌ ಬೆಲೆ ಜಾಸ್ತಿ ಇರುವುದರಿಂದ ಈ ರೀತಿ ಹೇಳಿ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.. ಈ ಬಗ್ಗೆ ವಂಚನೆಗೊಳಗಾದವರು ಪೊಲೀಸರಿಗೆ ದೂರು ಕೂಡಾ ನೀಡಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಪಾಗಲ್‌ ಪ್ರೇಮಿಯಿಂದ ಯುವತಿಯ ತಂದೆ-ತಾಯಿಯ ಬರ್ಬರ ಹತ್ಯೆ!

Share Post