ಆಘಾತಕಾರಿ ಸುದ್ದಿ; ತ್ರಿಪುರಾದಲ್ಲಿ HIVಗೆ 47 ವಿದ್ಯಾರ್ಥಿಗಳು ಬಲಿ!; 828 ವಿದ್ಯಾರ್ಥಿಗಳಿಗೆ ಸೋಂಕು!
ತ್ರಿಪುರಾ; ತ್ರಿಪುರಾದಲ್ಲಿ ಹೆಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಾರೆ.. ತ್ರಿಪುರಾ ಏಡ್ಸ್ ನಿಯಂತ್ರಣ ಸೊಸೈಟಿ ನೀಡಿದ ವರದಿ ಪ್ರಕಾರ ಇಲ್ಲಿ 47 ವಿದ್ಯಾರ್ಥಿಗಳು HIVಗೆ ಬಲಿಯಾಗಿದ್ದಾರೆ.. 828 ವಿದ್ಯಾರ್ಥಿಗಳು HIV ಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.. ಪರೀಕ್ಷೆಯಲ್ಲಿ ಇಷ್ಟ ಮಂದಿ ವಿದ್ಯಾರ್ಥಿಗಳಿಗೆ HIV ಪಾಸಿಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..
ತ್ರಿಪುರಾದಲ್ಲಿ ಪ್ರತಿ ದಿನ 5-7 ಹೊಸ ಹೆಚ್ಐವಿ ಪ್ರಕರಣಗಳು ಪತ್ತೆಯಾಗುತ್ತಿವೆ.. ತ್ರಿಪುರಾ ರಾಜ್ಯದಲ್ಲಿ ಇದುವರೆಗೆ 8729 ಮಂದಿಗೆ ಹೆಚ್ಐವಿ ಸೋಂಕಿದ್ದು, ಇದರಲ್ಲಿ 4570 ಮಂದಿ ಪುರುಷರು, 1103 ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ.. ಅದರಲ್ಲೂ ಕೂಡಾ ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ..