ಜೈಲಿನಲ್ಲಿ ದರ್ಶನ್‌ರನ್ನು ನೋಡಿ ಭಾವುಕರಾದ ತಾಯಿ ಮೀನಾ ತೂಗುದೀಪ!
ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ.. ಪ್ರಕರಣದ ತನಿಖೆ ಶುರುವಾದಂದನಿಂದ ದರ್ಶನ್ ಸಹೋದರ ದಿನಕರ್ ಹಾಗೂ ತಾಯಿ ಮೀನಾ ತೂಗುದೀಪ ಅವರು ಒಂದು ಮಾತೂ ಆಡಿರಲಿಲ್ಲ.. ದರ್ಶನ್ ಭೇಟಿ ಮಾಡುವ ಪ್ರಯತ್ನವನ್ನೂ ಮಾಡಿರಲಿಲ್ಲ.. ಆದ್ರೆ, ಇದೀಗ ಇಬ್ಬರೂ ಇಂದು ಪರಪ್ಪನ ಅಗ್ರಹಾರದ ಜೈಲಿಗೆ ಬಂದು ಭೇಟಿಯಾಗಿದ್ದಾರೆ.. ಈ ವೇಳೆ ಮೀನಾ ತೂಗುದೀಪ ಅವರು ಮಗ ದರ್ಶನ್ ಅವರನ್ನು ನೋಡಿ ಭಾವುಕರಾದರು ಎಂದು ತಿಳಿದುಬಂದಿದೆ..
ಕೆಲ ದಿನಗಳ ಹಿಂದೆ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿಯಾಗಿದ್ದರು.. ಅನಂತರ ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ ಮುಂತಾದರು ಭೇಟಿಯಾಗಿದ್ದರು.. ಇದಾದ ಮೇಲೆ ಇದೀಗ ತಾಯಿ ಮೀನಾ ಹಾಗೂ ಸಹೋದರ ದಿನಕರ್ ಕೂಡಾ ಭೇಟಿಯಾಗಿದ್ದಾರೆ.. ಕೆಲಹೊತ್ತು ಮಾತುಕತೆ ನಡೆಸಿದ್ದಾರೆ.. ಈ ವೇಳೆ ಮಗನ ಸ್ಥಿತಿಯನ್ನು ನೋಡಿ ಮೀನಾ ತೂಗುದೀಪ ಅವರು ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ..
ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ ಎಂದು ಗೊತ್ತಾದಾದ ಮೀನಾ ತೂಗುದೀಪ ಹಾಗೂ ದಿನಕರ್ ತೂಗುದೀಪ ಅವರು ತುಂಬಾನೇ ಬೇಜಾರು ಮಾಡಿಕೊಂಡಿದ್ದರು… ಮೈಸೂರಿನಲ್ಲಿರುವ ಮನೆಗೆ ಮಾಧ್ಯಮ ಪ್ರತಿನಿಧಿಗಳು ಹೋದರೂ ಪ್ರತಿಕ್ರಿಯೆ ನೀಡಲು ಮೀನಾ ಅವರು ನಿರಾಕರಣೆ ಮಾಡಿದ್ದರು.. ಇಷ್ಟು ದಿನ ಬೇಸರದಲ್ಲೇ ಇದ್ದ ಮೀನಾ ಅವರು ಕೊನೆಗೂ ಜೈಲಿಗೆ ಭೇಟಿ ನೀಡಿ ಮಗನನ್ನು ಮಾತನಾಡಿಸಿದ್ದಾರೆ..