BengaluruHealth

ರಾಜ್ಯದಲ್ಲಿ ಆತಂಕ ಹುಟ್ಟಿಸುತ್ತಿರುವ ಡೆಂಘಿ; ಬೆಂಗಳೂರಲ್ಲಿ ಪ್ರತಿ 2 ಗಂಟೆಗೆ ಇಬ್ಬರಲ್ಲಿ ಡೆಂಘಿ ಲಕ್ಷಣ!

ಬೆಂಗಳೂರು;  ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆ ಕಾಯಿಲೆಗಳ ಹಾವಳಿ ಕೂಡಾ ಹೆಚ್ಚಾಗುತ್ತಿದೆ.. ಅದ್ರಲ್ಲೂ ಕೂಡಾ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಡೆಂಘಿ ಮಹಾಮಾರಿಯ ಹಾವಳಿ ಜಾಸ್ತಿಯಾಗಿದೆ.. ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಸುಮಾರು 2457 ಮಂದಿಗೆ ಡೆಂಘೀ ಕಾಣಿಸಿಕೊಂಡಿದೆ.. ಅದ್ರಲ್ಲೂ ಕೆಲ ದಿನಗಳಿಂದ ಡೆಂಘಿ ಹರಡುವಿಕೆ ಹೆಚ್ಚಾಗಿದ್ದು, ಅನಾರೋಗ್ಯದಿಂದ ನೂರಾರು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ..

ಮಾಹಿತಿ ಪ್ರಕಾರ ಬೆಂಗಳೂರು ನಗರವೊಂದರಲ್ಲೇ ಪ್ರತಿ ಎರಡು ಗಂಟೆಗೆ ಇಬ್ಬರಲಕ್ಲಿ ಡೆಂಘಿ ಲಕ್ಷಣಗಳು ಕಂಡುಬರುತ್ತಿವೆ.. ಗ್ರಾಮೀಣ ಪ್ರದೇಶಗಳಲ್ಲೂ ಇದರ ಹಾವಳಿ ಹೆಚ್ಚಾಗುತ್ತಿದೆ.. ಆದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಸ್ಟಿಂಗ್‌ ಕಿಟ್‌ಗಳ ಕೊರತೆ ಇರವುದರಿಂದ ಪರದಾಟ ಹೆಚ್ಚಾಗುತ್ತಿದೆ.. ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗಲಾಗದೇ ಒದ್ದಾಡುತ್ತಿದ್ದಾರೆ..

ಬೆಂಗಳೂರಿನ ಆರೋಗ್ಯ ಕೇಂದ್ರಗಳಲ್ಲಿ ಟೆಸ್ಟಿಂಗ್‌ ಕಿಟ್‌ಗಳ ದಾಸ್ತಾನಿಲ್ಲ.. ನಗರದ ಆಸ್ಪತ್ರೆಗಳಲ್ಲಿ ದಿನಕ್ಕೆ ಈಗ ಕೇವಲ 200 ರಿಂದ 250 ಟೆಸ್ಟ್‌ಗಳನ್ನಷ್ಟೇ ಮಾಡಲಾಗುತ್ತಿದೆ.. ಇದೀಗ 30 ಸಾವಿರ ಟೆಸ್ಟಿಂಗ್ ಕಿಟ್ ಪೂರೈಸುವಂತೆ ಕೆಎಸ್​​ಎಂಸಿಗೆ ಪಾಲಿಕೆ ಬೇಡಿಕೆ ಇಟ್ಟಿದೆ.  ಇನ್ನು ಮೈಸೂರು, ಹಾಸನ, ಗದಗ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೂಡಾ ಡೆಂಘೀ ಹಾವಳಿ ಜಾಸ್ತಿಯಾಗಿದೆ..

 

Share Post