ಶಾಸಕರಿಗೆ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್ಮೇಲ್; ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದೇ ರೋಚಕ!
ಮೈಸೂರು; ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಗೌಡರಿಗೆ ಹನಿಟ್ರ್ಯಾಪ್ ರೀತಿಯಲ್ಲಿ ಫೇಕ್ ವಿಡಿಯೋ ಒಂದು ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.. ಮೈಸೂರು ಮೂಲದವರೇ ಆದ ಸಂತೋಷ್ ಹಾಗೂ ಪುಟ್ಟರಾಜು ಎಂಬುವವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.. ಓರ್ವ ಯುವತಿ ಕೂಡಾ ಇದರಲ್ಲಿ ಭಾಗಿಯಾಗಿದ್ದು, ಆಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ..
ರಾಜಕಾರಣಿಗಳು, ವಿಐಪಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಇವರು, ಅವರು ಉಳಿದುಕೊಳ್ಳುತ್ತಿದ್ದ ಹೋಟೆಲ್ಗಳಲ್ಲೇ ರೂಮ್ ಬುಕ್ ಮಾಡುತ್ತಿದ್ದರು.. ನಂತರ ಹುಡುಗಿಯನ್ನು ಬಳಸಿ ಆ ಕೊಠಡಿಯಲ್ಲಿ ಕ್ಯಾಮರಾ ಇಟ್ಟು ರೆಕಾರ್ಡ್ ಮಾಡುತ್ತಿದ್ದರು.. ನಂತರ ಆ ವಿಡಿಯೋವನ್ನು ಎಡಿಟ್ ಮಾಡಿ ಫೇಕ್ ವಿಡಿಯೋ ಸೃಷ್ಟಿ ಮಾಡುತ್ತಿದ್ದರು.. ಆ ವಿಡಿಯೋವನ್ನು ಸಂಬಂಧಪಟ್ಟವರಿಗೆ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಲಾಗುತ್ತಿತ್ತು.. ಅದೇ ರೀತಿ ಶಾಸಕ ಹರೀಶ್ ಗೌಡ ಅವರಿಗೂ ಬ್ಲ್ಯಾಕ್ ಮೇಲ್ ಮಾಡಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.. ಆದ್ರೆ ಇದಕ್ಕೆ ತಲೆಕೆಡಿಸಿಕೊಳ್ಳದ ಶಾಸಕ ಹರೀಶ್ ಗೌಡರು, ಸಿಸಿಬಿಗೆ ದೂರು ನೀಡಿದ್ದರು..ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ..
ಈ ಹಿಂದೆ ವಿಶ್ವವಿದ್ಯಾಲಯವೊಂದರ ಉಪಕುಲಪತಿಗೂ ಇದೇ ರೀತಿ ಬ್ಲ್ಯಾಕ್ ಮೇಲ್ ಮಾಡಲಾಗಿತ್ತು..