ಜೈಲಲ್ಲಿ ಮೌನಕ್ಕೆ ಶರಣಾದ ಪವಿತ್ರಾಗೌಡ!; ಉಪ್ಪು, ಖಾರವಿಲ್ಲದ ಊಟ ತಿನ್ನಲಾಗದೆ ಸಂಕಟ!
ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿಯಾಗಿರುವ ಪವಿತ್ರಾಗೌಡ ಅವರು ಜೈಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ ಪರದಾಡುತ್ತಿದ್ದಾರೆ.. ಕಳೆದ ಹತ್ತು ವರ್ಷಗಳಿಂದ ವೈಭವೋಪೇತ ಜೀವನ ನಡೆಸಿದ್ದ ಪವಿತ್ರಾಗೌಡ, ಜೈಲಲ್ಲಿ ನೀಡುವ ಉಪ್ಪು ಖಾರ ಇಲ್ಲದ ಊಟ ತಿನ್ನಲಾಗದ ಪರಿತಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ..
ಕಳೆದ ರಾತ್ರಿ ಎಲ್ಲಾ ಕೈದಿಗಳೂ ನೀಡುವಂತೆ ಪವಿತ್ರಾ ಗೌಡ ಅವರಿಗೂ ಮುದ್ದೆ, ಅನ್ನ ಸಾಂಬರ್, ಚಪಾತಿ ಹಾಗೂ ಮಜ್ಜಿಗೆ ನೀಡಲಾಗಿತ್ತು.. ಆದ್ರೆ ಸಹಜವಾಗಿ ಜೈಲಿನಲ್ಲಿ ಊಟಕ್ಕೆ ಉಪ್ಪು ಖಾರ ಕಡಿಮೆ ಹಾಕಿರುತ್ತಾರೆ.. ಹೀಗಾಗಿ ಅದನ್ನು ತಿನ್ನೋದಕ್ಕೆ ಪವಿತ್ರಗೌಡಗೆ ಆಗುತ್ತಿಲ್ಲವಂತೆ.. ಆದರೂ ಕೂಡಾ ಹಸಿವಾಗಿದ್ದರಿಂದ ಒಲ್ಲದ ಮನಸ್ಸಿನಿಂದಲೇ ಊಟ ಸೇವನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ..
ಇನ್ನು ಜೈಲು ಸೇರಿದ ಮೇಲೆ ಪವಿತ್ರಾ ಗೌಡ ಮೌನಕ್ಕೆ ಜಾರಿದ್ದಾರೆ.. ಯಾರ ಜೊತೆಗೂ ಅವರು ಮಾತನಾಡುತ್ತಿಲ್ಲ.. ಬೆಳಗ್ಗೆ ಎದ್ದು ಕಾಫಿ ಕುಡಿಯುವ ಅವರು, ಪತ್ರಿಕೆಗಳನ್ನು ಓದುತ್ತಾರೆ.. ಪತ್ರಿಕೆಗಳಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಏನೇನು ಬಂದಿದೆ ಎಂಬುದರ ಬಗ್ಗೆ ಕಣ್ಣಾಡಿಸುತ್ತಾರೆ ಎಂದು ಹೇಳಲಾಗುತ್ತಿದೆ..
ಇನ್ನು ದುಬಾರಿ ಬೆಡ್ ಮೇಲೆ ಮಲಗುತ್ತಿದ್ದ ಪವಿತ್ರಾಗೌಡಗೆ ಈಗ ಬರಿ ಚಾಪೆ ನೀಡಲಾಗಿದೆ.. ಅದರ ಮೇಲೆ ಮಲಗೋದಕ್ಕೆ ಆಗದೆ ನಿದ್ದೆಗೆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಇನ್ನು ಜೈಲಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸೊಳ್ಳೆಗಳು ಕಚ್ಚುತ್ತಿರುವುದರಿಂದ ಪವಿತ್ರಾಗೆ ನಿದ್ದೆ ಬರುತ್ತಿಲ್ಲ ಎಂದು ತಿಳಿದುಬಂದಿದೆ..