ಇಬ್ಬರು ಮಕ್ಕಳೂ ಜೈಲುಪಾಲು..!; ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಸಂಕಷ್ಟದ ಮೇಲೆ ಸಂಕಷ್ಟ!
ಬೆಂಗಳೂರು; ಒಂದು ಕಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದಾರೆ.. ಇತ್ತ ಅವರ ಹಿರಿಯ ಸಹೋದರ ಸೂರಜ್ ರೇವಣ್ಣ ಕೂಡಾ ಅದೇ ಹಾದಿ ಹಿಡಿದಿದ್ದಾರೆ.. ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ಸಲಿಂಗ ಲೈಂಗಿನ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸೂರಜ್ರನ್ನು ಬಂಧಿಸಲಾಗಿದೆ.. ಇದರಿಂದಾಗಿ ರೇವಣ್ಣ ಅವರ ಇಬ್ಬರು ಮಕ್ಕಳೂ ಜೈಲು ಸೇರಿದಂತಾಗಿದೆ.. ಇಬ್ಬರೂ ಕೂಡಾ ಲೈಂಗಿಕ ದೌರ್ಜನ್ಯದ ಆರೋಪದಡಿ ಜೈಲು ಸೇರಿರುವುದರಿಂದ ರೇವಣ್ಣಗೆ ತೀವ್ರ ಮುಜುಗರ ಉಂಟಾಗಿದೆ.. ಇತ್ತ ದೇವೇಗೌಡರು ಕೂಡಾ ಈ ಬಗ್ಗೆ ಸಾಕಷ್ಟು ನೊಂದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ..
ಇನ್ನು ಪ್ರಜ್ವಲ್ ರೇವಣ್ಣ ಕೇಸ್ನಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್ ಕೇಸ್ನಲ್ಲಿ ಮಾಜಿ ಸಚಿವ ರೇವಣ್ಣ ಕೂಡಾ ಜೈಲು ನೋಡಿ ಬಂದಿದ್ದಾರೆ.. ಅವರ ಪತ್ನಿ ಭವಾನಿ ರೇವಣ್ಣ ವಿರುದ್ಧ ಕೇಸ್ ದಾಖಲಾಗಿದೆ.. ಅವರು ನಿರೀಕ್ಷಣಾ ಜಾಮೀನು ಪಡೆದು ವಿಚಾರಣೆ ಎದುರಿಸುತ್ತಿದ್ದಾರೆ.. ಇದರಿಂದಾಗಿ ರೇವಣ್ಣ ಕುಟುಂಬಕ್ಕೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ.. ಒಂದು ಸಹೋದರ ಕುಮಾರಸ್ವಾಮಿ ಮಂಡ್ಯದಲ್ಲಿ ಗೆದ್ದು ಕೇಂದ್ರ ಸಚಿವರಾಗಿದ್ದರೆ, ಇತ್ತ ರೇವಣ್ಣ ಕುಟುಂಬದವರು ಅಧಿಕಾರವನ್ನೂ ಕಳೆದುಕೊಂಡು ಆರೋಪವನ್ನೂ ಎದುರಿಸುವಂತಾಗಿದೆ..
ಎಂಎಲ್ಸಿಯೂ ಆಗಿರುವ ಡಾ.ಸೂರಜ್ ರೇವಣ್ಣರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.. ಇನ್ನು ಈ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.. ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕಿರುವುದರಿಂದ ಸೂರಜ್ ಅವರ ಬಾಡಿ ವಾರಂಟ್ ಪಡೆದು, ಸೂರಜ್ ಅವರನ್ನು ಕಸ್ಟಡಿಗೆ ಪಡೆಯಲು ಸಿಐಡಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ..