BengaluruPolitics

ಡಿ.ಕೆ.ಶಿವಕುಮಾರ್‌ ಧರಿಸಿರುವ ಶಾಲು ಇಷ್ಟೊಂದು ದುಬಾರಿನಾ..? ; ಕುರುಡು ಕಾಂಚಾಣ ಕುಣಿಯುತ್ತಿದೆ ಎಂದ ಬಿಜೆಪಿ!

ಬೆಂಗಳೂರು; ರಾಜ್ಯ ಸರ್ಕಾರ ಇತ್ತೀಚೆಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ರಾಜ್ಯ ವಿಧಿಸುವ ಸುಂಕ ಏರಿಸಿದ್ದರಿಂದ ಅದರ ಬೆಲೆ ಜಾಸ್ತಿಯಾಗಿದೆ.. ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ.. ಆದ್ರೆ ಕಾಂಗ್ರೆಸ್‌ ನಾಯಕರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.. ನೀವು ಏರಿಕೆ ಮಾಡಿದಾಗ ಏನೂ ಮಾತನಾಡೋದಿಲ್ಲ.. ನಾವು ಸ್ವಲ್ಪ ಏರಿಕೆ ಮಾಡಿದರೆ ಪ್ರತಿಭಟನೆ ಮಾಡುತ್ತೀರಿ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ.. ಈ ನಡುವೆ ಬಿಜೆಪಿ ನಾಯಕರು ಡಿಸಿಎಂ ಡಿ.ಕೆ.ಶಿವಕುಮಾರ್‌ ಧರಿಸಿರುವ ಶಾಲು ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ.. ಡಿ.ಕೆ.ಶಿವಕುಮಾರ್‌ ಅವರು ದುಬಾರಿ ಶಾಲು ಧರಿಸಿದ್ದಾರೆ.. ಕುಡುರು ಕಾಂಚಾಣ ಕುಣಿಯುತ್ತಲಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ರಾಜ್ಯ ಬಿಜೆಪಿ ಅಧಿಕೃತ ಎಕ್ಸ್‌ ಖಾತೆಯಲ್ಲಿ ಡಿ.ಕೆ.ಶಿವಕುಮಾರ್‌ ಧರಿಸಿರುವ ಶಾಲು ಬಗ್ಗೆ ಬರೆಯಲಾಗಿದೆ.. ಡಿ.ಕೆ.ಶಿವಕುಮಾರ್‌ ಅವರು 59,500 ರೂಪಾಯಿ ಬೆಲೆಯ ಶಾಲು ಧರಿಸಿದ್ದಾರೆ. ಕುರುಡು ಕಾಂಚಾಣ ಕುಣಿಯುತ್ತಿದೆ ಅನ್ನೋದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಇಂತಹ ಅಂಧಾ ದರ್ಬಾರ್‌ ಸಾಕ್ಷಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.. ರಾಜ್ಯದ ಜನ ಬೆಲೆ ಏರಿಕೆಯಿಂದಾಗಿ ಜೀವನ ನಡೆಸಲಾಗದೆ ಪರದಾಡುತ್ತಿದ್ದಾರೆ.. ಇತ್ತ ಡಿ.ಕೆ.ಶಿವಕುಮಾರ್‌ ಶೋಕಿ ಮಾಡುತ್ತಿದ್ದಾರೆ.. ಜನರ ತೆರಿಗೆ ದುಡ್ಡಿನಲ್ಲಿ ಶೋಕಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ..

ಇನ್ನು ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ನಲ್ಲಿ ಆ ಶಾಲುಗೆ ಎಷ್ಟು ರೇಟಿದೆ ಎಂಬುದ ಸ್ಕ್ರೀನ್‌ ಶಾಟ್‌ ಕೂಡಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ..

 

Share Post