BengaluruCrime

3 ವರ್ಷದ ಮಗುವಿಗೆ ಯಮನಾದ ಮಲತಂದೆ!; ಸಿಗರೇಟ್‌ನಿಂದ ಸುಟ್ಟು ಮೃಗೀಯ ವರ್ತನೆ!

ಬೆಂಗಳೂರು; ಮೂರು ವರ್ಷದ ಮಗುವಿನ ಸಿಗರೇಟ್‌ನಿಂದ ಸುಟ್ಟು ಮಲತಂದೆಯೊಬ್ಬ ಮೃಗೀಯ ವರ್ತನೆ ತೋರಿದ್ದಾನೆ.. ಮಹಿಳೆಯ ಎರಡನೇ ಗಂಡನ ಮಗುವಿಗೆ ಮೂರನೇ ಗಂಡ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.. ಜೊತೆಗೆ ಮಗುವಿನ ತಾಯಿಯ ಮೇಲೂ ಕ್ರೌರ್ಯ ಮೆರೆದಿದ್ದು ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂದು ತಿಳಿದುಬಂದಿದೆ..

ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ.. ಜರೀನಾ ತಾಜ್‌ ಎಂಬ ಮಹಿಳೆ ಹಾಗೂ ಆಕೆಯ ಮೂರು ವರ್ಷದ ಮಗು ತೀವ್ರ ಹಲ್ಲೆಗೊಳಗಾದವರು.. ಜರೀನಾ ತಾಜ್‌ ಮೂರನೇ ಪತಿ ಅಜ್ಮಂತ್‌ ಎಂಬಾತ, 3 ವರ್ಷದ ಮಗುವಿನ ಮುಖ, ಕತ್ತು ಹಾಗೂ ತಲೆ ಭಾಗದಲ್ಲಿ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದಾನೆ.. ಕಾಲಿನ ಮೇಲೆ ದಾಳಿ ಮಾಡಿರುವುದರಿಂದ ಕಾಲು ಕತ್ತರಿಸಿದಂತಾಗಿದೆ.. ತೀವ್ರ ಗಾಯಗೊಂಡಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..

ಜರೀನಾ ತಾಜ್‌ ಮೂರು ಮದುವೆಯಾಗಿದ್ದು, ಮೊದಲ ಗಂಡನಿಂದ ಎರಡು ಹೆಣ್ಣ ಮಕ್ಕಳು ಆಗಿದ್ದವು.. ಎರಡನೇ ಪತಿಯಿಂದ ಒಂದು ಹೆಣ್ಣು ಮಗು ಆಗಿತ್ತು.. ಆ ಹೆಣ್ಣು ಮಗುವಿನ ಮೇಲೇ ಕ್ರೌರ್ಯ ಮಾಡಿರುವುದು.. ಮೊದಲ ಇಬ್ಬರು ಗಂಡಂದಿರನ್ನು ತೊರೆದಿದ್ದ ಜರೀನಾ ತಾಜ್‌, ಅಜ್ಮಂತ್‌ ಜೊತೆ ಮೂರನೇ ಮದುವೆಯಾಗಿದ್ದಳು.. ಈಗ ಮೂರನೇ ಗಂಡ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಜರೀನಾ ತಾಜ್‌ ಆರೋಪಿಸುತ್ತಿದ್ದಾರೆ..

 

Share Post