BengaluruCinemaCrime

ಕೊಲೆ ಆರೋಪಿ ದರ್ಶನ್‌ ಮನೆ ತೆರವು ಮಾಡ್ತಾರಾ..?; ಡಿ.ಕೆ.ಶಿವಕುಮಾರ್‌ ಹೇಳಿದ್ದೇನು..?

ಬೆಂಗಳೂರು; ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಸಾರ್ವಜನಿಕರು ಸಾಮಾನ್ಯರಿಗೆ ಒಂದು ನ್ಯಾಯ, ದೊಡ್ಡವರಿಗೊಂದು ನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದರು.. ಇದೀಗ ಸರ್ಕಾರ ಈ ಬಗ್ಗೆ ದಿಟ್ಟ ಕ್ರಮ ಕೈಗೊಳ್ಳುವಂತೆ ಕಾಣುತ್ತಿದೆ.. ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ತೆರವು ಮಾಡೋದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ… ಹೀಗಾಗಿ ನಟ ದರ್ಶನ್‌ ಅವರ ಮನೆ ಕೂಡಾ ತೆರವು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..

ರಾಜಕಾಲುವೆ ಒತ್ತುವರಿಯನ್ನು ಯಾರೇ ಮಾಡಿದ್ದರೂ ಸರಿ, ಯಾವುದೇ ಕಾರಣಕ್ಕೂ ಬಿಡುವುದಿಲ್ಲ.. ಕೋರ್ಟ್‌ನಿಂದ ಸ್ಟೇ ತಂದಿದ್ದರೂ ಕೂಡಾ ಕಾನೂನಿನ ಅಡಿಯಲ್ಲೇ ತೆರವು ಕಾರ್ಯಾಚರಣೆ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.. ನೀನು, ನಾನು ಯಾರೇ ಸ್ಟೇ ತಂದಿದ್ದರೂ ಕೂಡಾ ಕಾನೂನಿನ ಪ್ರಕಾರವೇ ತೆರವು ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.. ಈ ಮೂಲಕ ದರ್ಶನ್‌ ಮನೆಯ ನೆಲಸಮ ಮಾಡುವ ಸೂಚನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ..

ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ನಲ್ಲಿ ರಾಜ ಕಾಲುವೆ ಮೇಲೆ ದರ್ಶನ್‌ ಅವರ ತೂಗುದೀಪ ನಿವಾಸ ಮನೆ ನಿರ್ಮಾಣ ಮಾಡಲಾಗಿದೆ.. ಇದರ ಜೊತೆಗೆ ಕಾಂಗ್ರೆಸ್‌ನ ಹಿರಿಯ ಶಾಸಕ ಶಿವಶಂಕರಪ್ಪ ಅವರ ಎಸ್‌ ಎಸ್‌ ಆಸ್ಪತ್ರೆ ಸೇರಿ 67 ಕಟ್ಟಡಗಳಿವೆ.. ಈ ಕಟ್ಟಡಗಳವರು ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ.. ಈ ಕಾರಣಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ..

ಆದ್ರೆ ದರ್ಶನ್‌ ಅವರ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವುದರಿಂದ ಈ ವಿಚಾರ ಹೆಚ್ಚು ಮುನ್ನೆಲೆಗೆ ಬಂದಿದೆ.. ಈ ನಡುವೆ ಅವರ ಮನೆ ತೆರವು ಮಾಡುತ್ತಾರೆಂಬ ಮಾತು ಕೇಳಿಬಂದಿದ್ದು, ಈ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ..

 

Share Post