ಅಮೆಜಾನ್ ಪಾರ್ಸೆಲ್ನಲ್ಲಿತ್ತು ಜೀವಂತ ನಾಗರಹಾವು!; ಬೆಂಗಳೂರಿನ ದಂಪತಿಗೆ ಶಾಕ್!
ಬೆಂಗಳೂರು; ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ವಾಸ ಮಾಡುವ ಟೆಕ್ಕಿ ದಂಪತಿ ಅಮೆಜಾನ್ ಆಪ್ ಮೂಲಕ ವಸ್ತುವೊಂದನ್ನು ಆರ್ಡರ್ ಮಾಡಿದ್ದು, ಡೆಲಿವರಿಯಾದ ಪ್ಯಾಕ್ನಲ್ಲಿ ಜೀವಂತ ನಾಗರಹಾವು ಕಂಡು ಹೌಹಾರಿದ್ದಾರೆ.. ದಂಪತಿಗಳಿಬ್ಬರೂ ಸಾಫ್ಟ್ವೇರ್ ಎಂಜಿನಿಯರ್ಗಳಾಗಿದ್ದು, ಅವರು ಅಮೆಜಾನ್ ನಲ್ಲಿ ಎಕ್ಸ್ ಬಾಕ್ಸ್ ನಿಯಂತ್ರಕ ಆರ್ಡರ್ ಮಾಡಿದ್ದರು.. ಆ ಆರ್ಡರ್ ಡೆಲಿವರಿ ಆಗಿದ್ದು, ಅದನ್ನು ತೆರೆದು ನೋಡಿದಾಗ ಜೀವಂತ ನಾಗರಹಾವು ಹೊರಬಂದಿದೆ.. ಇದರಿಂದಾಗಿ ದಂಪತಿ ಒಮ್ಮೆಗೆ ಭೀತಿಗೊಳಗಾಗಿದ್ದಾರೆ..
ಆರ್ಡರ್ ಓಪನ್ ಮಾಡಿದಾಗ ಹಾವು ಹೊರಬಂದಿತ್ತು.. ಆದ್ರೆ ಅದು ಪ್ಯಾಕೇಜ್ ಟೇಪ್ಗೆ ಅಂಟಿಕೊಂಡಿತ್ತು.. ಈ ಹಿನ್ನೆಲೆಯಲ್ಲಿ ದಂಪತಿ ಬಚಾವ್ ಆಗಿದ್ದಾರೆ.. ಇಲ್ಲದೇ ಹೋದರೆ ಅದು ದಂಪತಿಗೆ ಕಚ್ಚುವ ಅಪಾಯವಿತ್ತು..
ದಂಪತಿ ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ;
“ನಾವು 2 ದಿನಗಳ ಹಿಂದೆ ಅಮೆಜಾನ್ನಿಂದ ಎಕ್ಸ್ಬಾಕ್ಸ್ ನಿಯಂತ್ರಕವನ್ನು ಆರ್ಡರ್ ಮಾಡಿದ್ದೇವು. ಅದರಲ್ಲಿ ಜೀವಂತ ಹಾವು ಬಂದಿದೆ.. ಪ್ಯಾಕೇಜ್ ಅನ್ನು ನೇರವಾಗಿ ವಿತರಣಾ ಪಾಲುದಾರರು ನಮಗೆ ಹಸ್ತಾಂತರಿಸಿದ್ದಾರೆ. ನಾವು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ವಾಸಿಸುತ್ತಿದ್ದೇವೆ ಮತ್ತು ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇವೆ. ಜೊತೆಗೆ ನಾವು ಅದಕ್ಕೆ ಪ್ರತ್ಯಕ್ಷದರ್ಶಿಗಳನ್ನು ಹೊಂದಿದ್ದೇವೆ” ಎಂದು ಗ್ರಾಹಕರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ..
“ಅದೃಷ್ಟವಶಾತ್, ಆ ಹಾವು ಪ್ಯಾಕೇಜಿಂಗ್ ಟೇಪ್ಗೆ ಅಂಟಿಕೊಂಡಿತ್ತು. ಇದರಿಂದಾಗಿ ಅದು ಅಲ್ಲಿಂದ ಹೊರಕ್ಕೆ ಬರಲು ಆಗಲಿಲ್ಲ.. ಇದರಿಂದಾಗಿ ನಮಗೆ ಹಾಗೂ ಆಪಾರ್ಟ್ಮೆಂಟ್ನಲ್ಲಿರುವವರಿಗೆ ಯಾರಿಗೂ ತೊಂದರೆಯಾಗಿಲ್ಲ. ಅಪಾಯದ ಹೊರತಾಗಿಯೂ, Amazon ನ ಕಸ್ಟಮರ್ ಕೇರ್ಗೆ ನಾವು ಕರೆ ಮಾಡಿದ್ದೆವು.. ಆದ್ರೆ ಎರಡು ಗಂಟೆಗಳಾದರೂ ನಮಗೆ ನೆರವು ಸಿಗಲಿಲ್ಲ.. ಪರಿಸ್ಥಿತಿಯನ್ನು ನಾವೇ ನಿಭಾಯಿಸಲು ಒತ್ತಾಯಿಸಲಾಯಿತು. (ಪುರಾವೆ ವೀಡಿಯೊಗಳು ಮತ್ತು ಫೋಟೋಗಳಲ್ಲಿ ಸೆರೆಹಿಡಿಯಲಾಗಿದೆ),” ಅವರು ಹೇಳಿಕೊಂಡಿದ್ದಾರೆ.
“ನಾವು ಸಂಪೂರ್ಣ ಮರುಪಾವತಿಯನ್ನು ಸ್ವೀಕರಿಸಿದ್ದೇವೆ, ಆದರೆ ವಿಷಪೂರಿತ ಹಾವಿನೊಂದಿಗೆ ಪಾರ್ಸೆಲ್ ಕಳುಹಿಸಿದ್ದಾರೆ.. ನಮ್ಮ ಜೀವಕ್ಕೆ ಅಪಾಯವಾಗಿದ್ದರೆ ಯಾರು ಗತಿ ಎಂದು ಅವರು ಕೇಳಿದ್ದಾರೆ.. ಇದು ಸ್ಪಷ್ಟವಾಗಿ ಅಮೆಜಾನ್ನ ನಿರ್ಲಕ್ಷ್ಯ ಮತ್ತು ಅವರ ಕಳಪೆ ಸಾರಿಗೆ/ಗೋದಾಮಿನ ನೈರ್ಮಲ್ಯ ಮತ್ತು ಮೇಲ್ವಿಚಾರಣೆಯಿಂದ ಉಂಟಾದ ಸುರಕ್ಷತಾ ಉಲ್ಲಂಘನೆಯಾಗಿದೆ ಎಂದು ಗ್ರಾಹಕರು ಆರೋಪ ಮಾಡಿದ್ದಾರೆ.
AMAZON ನ ಪ್ರತಿಕ್ರಿಯೆ
ಗ್ರಾಹಕರ ವೀಡಿಯೊಗೆ ಪ್ರತಿಕ್ರಿಯಿಸಿದ ಅಮೆಜಾನ್ ಕಂಪನಿಯು ಟ್ವೀಟ್ ಮಾಡಿದೆ, “ಅಮೆಜಾನ್ ಆರ್ಡರ್ನಲ್ಲಿ ನೀವು ಹೊಂದಿರುವ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ಇದನ್ನು ಪರಿಶೀಲಿಸಲು ನಾವು ಬಯಸುತ್ತೇವೆ. ದಯವಿಟ್ಟು ಅಗತ್ಯವಿರುವ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ, ಮತ್ತು ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ.” ಎಂದು ಅಮೆಜಾನ್ ಟ್ವೀಟ್ಗೆ ಉತ್ತರ ಕೊಟ್ಟಿದೆ..
ಹಾವನ್ನು ಸಾರ್ವಜನಿಕರ ಕೈಗೆ ಸಿಗದಂತೆ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ ಎಂದು ದಂಪತಿ ಹೇಳಿಕೊಂಡಿದ್ದಾರೆ..