ಪ್ರವೀಣ್ ಹತ್ಯೆಗೆ ಮೂರು ದಿನಗಳ ಕಾಲ ಸ್ಕೆಚ್; ಆರೋಪಿಗಳಿಗೆ ಊಟ ಕೊಡ್ತಿದ್ದನಂತೆ ಜಾಕೀರ್!
ಮಂಗಳೂರು; ಸುಳ್ಯ ತಾಲ್ಲೂಕಿನಲ್ಲಿ ನಡೆದ ಹಿಂದೂ ಪರ ಸಂಘಟನೆ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅಂದಹಾಗೆ, ವಿಚಾರಣೆ ವೇಳೆ ಪೊಲೀಸರಿಗೆ ಮಹತ್ವ ಮಾಹಿತಿಗಳು ಗೊತ್ತಾಗಿವೆ ಎಂದು ತಿಳಿದುಬಂದಿದೆ. ಪ್ರವೀಣ್ ಹತ್ಯೆಯನ್ನು ಪಕ್ಕಾ ಪ್ಲ್ಯಾನ್ ಮಾಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರವೀಣ್ ಅವರನ್ನು ಬೈಕ್ನಲ್ಲಿ ಬಂದ ಮೂವರು ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಮೂವರು ಆರೋಪಿಗಳಿಗೆ ಶಫೀಕ್ ಹಾಗೂ ಜಾಕೀರ್ ಸಹಕಾರ ನೀಡಿದ್ದಾರೆ ಎಂದು ಹೇಳಲಾಗಿದೆ. ಬೈಕ್ನಲ್ಲಿ ಬಂದಿದ್ದ ಮೂವರು ಆರೋಪಿಗಳು ಮೂರು ದಿನಗಳ ಕಾಲ ಪ್ರವೀಣ್ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಅಜ್ಞಾತ ಸ್ಥಳದಲ್ಲಿದ್ದುಕೊಂಡು ಪ್ರವೀಣ್ ಹತ್ಯೆಗೆ ಹೊಂಚು ಹಾಕಿದ್ದರು ಎಂದು ಹೇಳಲಾಗಿದೆ. ಇನ್ನು ಈ ವೇಳೆ ಮೂವರೂ ಹಂತಕರಿಗೆ ಈಗಾಗಲೇ ಬಂಧಿತನಾಗಿರುವ ಜಾಕೀರ್ ಎಂಬಾತ ಊಟ ಪಾರ್ಸೆಲ್ ತಂದುಕೊಡುತ್ತಿದ್ದ ಎಂದು ತಿಳಿದುಬಂದಿದೆ.