BengaluruLifestyle

ವಿಜಯ್‌ ಮಲ್ಯ ಪುತ್ರನಿಗೆ ಕೊನೆಗೂ ಕಂಕಣ ಭಾಗ್ಯ; ಹುಡುಗಿ ಯಾರು ಗೊತ್ತಾ..?

ಬೆಂಗಳೂರು; ವಿಜಯ್‌ ಮಲ್ಯ ಪುತ್ರನಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿಬಂದಿದೆ.. ಉದ್ಯಮಿ ವಿಜಯ್‌ ಮಲ್ಯ ಪುತ್ರ ಸಿದ್ದಾರ್ಥ ಮಲ್ಯ ಅವರು ಜಾಸ್ಮಿನ್‌ ಎಂಬಾಕೆಯನ್ನು ವಿವಾಹವಾಗುತ್ತಿದ್ದಾರೆ.. ಅವರು ಪೋಟೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೆಡ್ಡಿಂಗ್‌ ವೀಕ್‌ ಎಂದು ಬರೆದುಕೊಂಡಿದ್ದಾರೆ..

ಮಲ್ಯ ಅವರು ಸಾವಿರಾರು ಕೋಟಿ ಸಾಲ ಮಾಡಿ ಲಂಡನ್‌ಗೆ ಪರಾರಿಯಾಗಿದ್ದಾರೆ.. ಅದಾದ ಮೇಲೆ ಅವರ ಮಗ ಸಿದ್ಧಾರ್ಥ್‌ ಎಲ್ಲಿದ್ದಾರೆ ಎಂದು ತಿಳಿದುಬಂದಿರಲಿಲ್ಲ.. ಅಂದಹಾಗೆ ಈ ಮೊದಲ ನಟಿ ದೀಪಿಕಾ ಪಡುಕೋಣೆ ಅವರನ್ನು ಸಿದ್ದಾರ್ಥ್‌ ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.. ಆದ್ರೆ ವಿಜಯ್‌ ಮಲ್ಯ ಪರಾರಿಯಾದ ಮೇಲೆ ಈ ಸುದ್ದಿ ತೆರೆಮರೆಗೆ ಸರಿದಿತ್ತು.. ಇದೀಗ ವಿಜಯಮಲ್ಯ ಪುತ್ರ ಸಿದ್ಧಾರ್ಥ್‌, ಜಾಸ್ಮಿನ್‌ ಎಂಬಾಕೆಯನ್ನು ಮದುವೆಯಾಗುತ್ತಿದ್ದಾರೆ..

ಜಾಸ್ಮಿನ್‌ ಮಾಡೆಲ್‌ ಆಗಿದ್ದು, ಇಬ್ಬರೂ ಕ್ಯಾಲಿಫೋರ್ನಿಯಾದ ಹ್ಯಾಲೋವಿನ್ ಪಾರ್ಟಿಯಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದರು.. ಅನಂತರ 2023 ರಲ್ಲಿ ಇಬ್ಬರು ಎಂಗೇಜ್‌ ಆಗಿದ್ದು, ಡೇಟಿಂಗ್‌ ಕೂಡಾ ಮಾಡುತ್ತಿದ್ದರು.. ಇದೀಗ ಇವರಿಬ್ಬರೂ ಮದುವೆಯಾಗುತ್ತಿದ್ದಾರೆ.. ಸಿದ್ಧಾರ್ಥ್‌ ಅವರು ಇತ್ತೀಚೆಗೆ ಮೆಂಟಲ್‌ ಹೆಲ್ತ್‌ ಬಗ್ಗೆ ಎರಡು ಪುಸ್ತಕಗಳನ್ನು ಬರೆದಿದ್ದಾರೆ ಎಂದು ತಿಳಿದುಬಂದಿದೆ..

 

Share Post