ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ಮಾಡಿಸ್ತಾರಂತೆ!; ಮುಜುಗರ ಆಗುತ್ತೆ ಅಂದ ಪ್ರಜ್ವಲ್!
ಬೆಂಗಳೂರು; ಲೈಂಗಿಕ ದೌರ್ಜನ್ಯ ಆರೋಪದಡಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಈಗಾಗಲೇ ಎರಡು ಬಾರಿ ಪುರುಷತ್ವ ಪರೀಕ್ಷೆ ಮಾಡಲಾಗಿದೆಯಂತೆ.. ಮೂರನೇ ಬಾರಿ ಅದೇ ಪರೀಕ್ಷೆ ಮಾಡಿಸಬೇಕೆಂದು ಪೊಲೀಸರು ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದ್ದಾರೆ.. ಇದಕ್ಕೆ ಪ್ರಜ್ವಲ್ ರೇವಣ್ಣ ನನಗೆ ಮುಜುಗರ ಆಗುತ್ತೆ ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ..
ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್ಗೆ ಹಾಜರುಪಡಿಸಿದ್ದರು.. ಈ ವೇಳೆ ಪೊಲೀಸರು ಮತ್ತೊಮ್ಮೆ ಪ್ರಜ್ವಲ್ ರೇವಣ್ಣ ಅವರನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಬೇಕಿದೆ.. ಅದಕ್ಕೆ ಅನುಮತಿ ನೀಡಬೇಕೆಂದು ಕೋರಿದ್ದಾರೆ ಎಂದು ತಿಳಿದುಬಂದಿದೆ..
ಮತ್ತೊಮ್ಮೆ ಪುರುಷತ್ವ ಪರೀಕ್ಷೆ ಅಂದ ಕೂಡಲೇ ಪ್ರಜ್ವಲ್ ಆ ಪರೀಕ್ಷೆ ತುಂಬಾ ಮುಜುಗರ ಆಗುತ್ತದೆ.. ನಾನು ಈಗಾಗಲೇ ಎರಡು ಕೇಸ್ ನಲ್ಲಿ ಪುರುಷತ್ವ ಪರೀಕ್ಷೆ ಮಾಡಿಸಿದ್ದೇನೆ.. ಎರಡು ಸಲ ಕೇಳಿದ್ದಕ್ಕೆ ನಾನೇ ಮಾಡಿದ್ದೇನೆ.. ಈಗ ಮತ್ತೆ ಅದೇ ಪರೀಕ್ಷೆ ಮಾಡಿಸಬೇಕು ಎನ್ನುತ್ತಿದ್ದಾರೆ.. ಇದರಿಂದ ಮುಜುಗರ ಆಗುತ್ತದೆ ಎಂದು ನ್ಯಾಯಾಧೀಶರ ಮುಂದೆ ಪ್ರಜ್ವಲ್ ಗೋಳು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ..