ಹುಳುಕು ಹಲ್ಲು ಆಗ್ತಿದೆಯಾ..?; ನಿಮ್ಮ ಆಹಾರ ಶೈಲಿ ಹೀಗೆ ಬದಲಾಯಿಸಿ!
ನಮ್ಮ ಬದಲಾದ ಆಹಾರ ಪದ್ಧತಿಯಿಂದಾಗಿ ಬಹುತೇಕರು ಹಲ್ಲಿನ ಸಮಸ್ಯೆ ಎದುರಿಸುತ್ತಿದ್ದಾರೆ.. ಹುಳುಕು ಹಲ್ಲು ಸಮಸ್ಯೆಯಿಂದ ಹೊರಬರಲಾರದೆ ಸಂಕಷ್ಟ ಎದುರಿಸುತ್ತಿದ್ದಾರೆ.. ಹಲ್ಲು ನೋವಿಗೆ, ಹಲ್ಲು ಸಮಸ್ಯೆಗೆ ಪರಿಹಾರವೇ ಇಲ್ಲವೇ ಎಂದು ಬಹುತೇಕರು ಕೇಳುತ್ತಾರೆ.. ಆದ್ರೆ ನಾವು ತಿನ್ನುವ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ಹಲ್ಲು ಸಮಸ್ಯೆಯಿಂದ ದೂರ ಬರಬಹುದು ಎಂದು ತಜ್ಞರು ಹೇಳುತ್ತಾರೆ..
ನಾವು ಆರೋಗ್ಯಕರ ಆಹಾರ ಸೇವನೆ ಮಾಡಿದರೆ ನಮಗೆ ಯಾವ ಕಾರಣಕ್ಕೂ ಹಲ್ಲು ಸಮಸ್ಯೆ ಬರೋದಿಲ್ಲ.. ಸೊಪ್ಪು, ತರಕಾರಿಗಳನ್ನು ಹೆಚ್ಚು ತಿನ್ನವೇಕು.. ಆದಷ್ಟು ಸಿಹಿ ಪದಾರ್ಥಗಳಿಂದ ದೂರ ಇರುವುದು ಒಳ್ಳೆಯದು..
ಹಲ್ಲು ಆರೋಗ್ಯವಾಗಿರಲು ನೀರು ಹೆಚ್ಚಾಗಿ ಕುಡಿಯುವುದು ಅಗತ್ಯ.. ಎಷ್ಟೇ ಕೆಲಸದ ಒತ್ತಡವಿದ್ದರೂ ಆಗಾಗ ನೀರು ಕುಡಿಯುತ್ತಾ ಬರಬೇಕು.. ಹಾಗೆ ಮಾಡುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು.. ಇದರ ಜೊತೆಗೆ ಹಲ್ಲಿನ ಮೇಲೆ ಕೂರುವ ಸಕ್ಕರೆ ಹಾಗೂ ಆಮ್ಲಗಳನ್ನು ಹೋಗಲಾಡಿಸಿ, ಹಲ್ಲುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ..
ನಾವು ಆಹಾರ ಸೇವಿಸಿದ ಮೇಲೆ ನೀರಿನಿಂದ ಬಾಯಯನ್ನು ಮುಕ್ಕಳಿಸುವುದು ಒಳ್ಳೆಯದು.. ಯಾಕಂದ್ರೆ, ನಾವು ತಿಂದ ಆಹಾರದಲ್ಲಿ ಕೆಲ ಕಣಗಳಲ್ಲಿ ಹಲ್ಲಿನ ನಡುವೆ ಸಿಕ್ಕಿಕೊಳ್ಳುತ್ತವೆ.. ಅವು ಅಲ್ಲಿಯೇ ಗಂಟೆಗಟ್ಟಲೆ ಇದ್ದರೆ ಅಲ್ಲಿ ಕ್ಯಾವಿಟಿ ಉಂಟಾಗುತ್ತದೆ.. ಇದರಿಂದಾಗಿ ಒಸಡು ಹಾಗೂ ಹಲ್ಲುಗಳಿಗೆ ಹಾನಿಯಾಗುತ್ತದೆ.. ಹೀಗಾಗಿ ನೀರಿನಿಂದ ಬಾಯಿಯನ್ನು ಆಗಾಗ ಮುಕ್ಕಳಿಸುತ್ತಾ ಬಂದಾಗ ನಮಗೆ ಹಲ್ಲು ಸ್ವಚ್ಛವಾಗಿ ಆರೋಗ್ಯವಾಇರಲು ಸಹಾಯವಾಗುತ್ತದೆ..
ಹಾಲಿನಲ್ಲಿರುವ ಕ್ಯಾಲ್ಸಿಯಂ ನಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ.. ಹೀಗಾಗಿ ನಾವು ನಿಯಮಿತವಾಗಿ ಹಾವು ಸೇವನೆ ಮಾಡುವುದರಿಂದ ನಮ್ಮ ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ.. ಇನ್ನು ಹಸಿರುವ ತರಕಾರಿಗಳು, ಅಧಿಕ ನಾರಿನಂಶವಿರುವ ತರಕಅರಿಗಳನ್ನು ತಿನ್ನುವುದುರಿಂದ ಹಲ್ಲುಗಳ ಆರೋಗ್ಯ ಉತ್ತಮವಾಗುತ್ತದೆ..
ಸೌತೆಕಾಯಿ ಮತ್ತು ಟೊಮೇಟೊ ಹಣ್ಣುಗಳನ್ನು ಹಸಿಯಾಗಿ ತಿಂದರೆ ಹಲ್ಲು ಹಾಗೂ ವಸಡುಗಳು ದೀರ್ಘಕಾಲದವರೆಗೆ ಆರೋಗ್ಯವಾಗಿರುತ್ತವೆಯಂತೆ..! ಅದೇ ರೀತಿಯಯಲ್ಲಿ ಹಣ್ಣುಗಳನ್ನು ಹಾಗೆಯೇ ಕಚ್ಚಿ ತಿನ್ನುವುದು, ಶುದ್ಧ ತೆಂಗಿನ ಎಣ್ಣೆಯನ್ನು ಒಂದು ಚಮಚದಷ್ಟು ಬಾಯಿಗೆ ಹಾಕಿಕೊಂಡು ಮುಕ್ಕಳಿಸಿ ಕುಡಿಯುವುದರಿಂದಲೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು..