Politics

Breaking; ನಾವೂ ಇಂಡಿಯಾ ಒಕ್ಕೂಟದ ಭಾಗ; ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ; ನಾವು ಕೂಡಾ ಇಂಡಿಯಾ ಒಕ್ಕೂಟದ ಭಾಗವಾಗಿದ್ದು, ನಾಳಿನ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಭಾಗಿಯಾಗುತ್ತೇನೆ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.. ಈ ಬಗ್ಗೆ ಮಾತನಾಡಿರುವ ಅವರು, ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ.. ಹೀಗಾಗಿ ಪ್ರಧಾನಿ ಮೋದಿಯವರು ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ..

ಬಿಹಾರದಲ್ಲಿನ ಫಲಿತಾಂಶವನ್ನು ನಾನು ಒಪ್ಪೋದಿಲ್ಲ ಎಂದಿರುವ ಮಮತಾ ಬ್ಯಾನರ್ಜಿ, ಟಿಎಂಸಿ ಪಾರ್ಟಿ ಇಂಡಿಯಾ ಒಕ್ಕೂಟದ ಭಾಗವಾಗಲಿದೆ ಎಂದು ಹೇಳಿದ್ದಾರೆ.. ಇನ್ನು ಜೆಡಿಯು ಹಾಗೂ ತೆಲುಗುದೇಶಂ ಪಕ್ಷಗಳನ್ನು ಊರುಗೋಲಾಗಿ ಬಿಜೆಪಿ ಬಳಸಿಕೊಳ್ಳಲಿದೆ.. ಹೀಗಾಗಿ ಎರಡೂ ಪಕ್ಷದ ನಾಯಕರು ಯೋಚನೆ ಮಾಡಬೇಕಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ..

Share Post