ಜೆಡಿಎಸ್ ಕಾರಣದಿಂದ ಬಿಜೆಪಿಗೆ ಒಕ್ಕಲಿಗರ ಬಲ!; ಲಿಂಗಾಯತರ ಮತ ಕಳೆದುಕೊಳ್ಳುತ್ತಿರುವ ಕಮಲ ಪಕ್ಷ!
ಬೆಂಗಳೂರು; ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವಿನತ್ತ ಸಾಗಿದೆ.. ಕಾಂಗ್ರೆಸ್ ಪಕ್ಷ 9 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಅಷ್ಟೂ ಸ್ಥಾನಗಳಲ್ಲಿ ಗೆಲ್ಲೋದು ಪಕ್ಕಾ ಆಗಿದೆ.. ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆದ್ದಿದೆ.. ಇದೆಲ್ಲಾ ನೋಡ್ತಾ ಇದ್ರೆ, ಬಿಜೆಪಿ ಒಕ್ಕಲಿಗ ಮತಗಳು ಹೆಚ್ಚು ಕೈ ಹಿಡಿದಂತೆ ಕಾಣುತ್ತಿವೆ..
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು.. ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಟ್ಟ ಕಾರಣದಿಂದ ಹಲವು ಕ್ಷೇತ್ರಗಳು ಬಿಜೆಪಿಗೆ ಬಂದಿವೆ.. ಯಾವಾಗಲೂ ಲಿಂಗಾಯತ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿತ್ತು.. ಆದ್ರೆ ಈ ಬಾರಿ ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿ ನಷ್ಟ ಅನುಭವಿಸಿದೆ.. ಆದ್ರೆ ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಾಕಷ್ಟು ಲಾಭವಾಗಿದೆ.. ಜೆಡಿಎಸ್ಗೆ ಮೊದಲಿನಿಂದಲೂ ಒಕ್ಕಲಿಗರ ಬೆಂಬಲವಿರುವುದರಿಂದ ಹಳೇ ಮೈಸೂರು ಭಾಗದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಸುಲಭವಾಗಿದೆ..
ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಬೆಂಗಳೂರು ಗ್ರಾಮಾಂತರ, ಉಡುಪಿ-ಚಿಕ್ಕಮಗಳೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ.. ಈ ಎಲ್ಲಾ ಕಡೆ ಒಕ್ಕಲಿಗರ ಪ್ರಾಬಲ್ಯವಿದೆ.. ಈ ಕ್ಷೇತ್ರಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದಿದ್ದರೆ ಬಿಜೆಪಿ ಗೆಲ್ಲೋದು ಕಷ್ಟವಾಗುತ್ತಿತ್ತು.. ಕಾಂಗ್ರೆಸ್ ಪಕ್ಷವನ್ನು ಸಿಂಗಲ್ ಡಿಜಿಟ್ಗೆ ಸೀಮಿತ ಮಾಡೋದು ಈ ಚುನಾವಣೆಯಲ್ಲಿ ಸಾಧ್ಯವಾಗುತ್ತಿರಲಿಲ್ಲ.. ಆದ್ರೆ ಜೆಡಿಎಸ್ ಬೆಂಬಲದ ಕಾರಣದಿಂದ ಬಿಜೆಪಿಗೆ ಐದಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸುಲಭವಾಗಿದೆ.. ಆ ಸ್ಥಾನಗಳನ್ನು ಜೆಡಿಎಸ್ ಬಿಜೆಪಿ ಒಂದಾದ ಕಾರಣದಿಂದ ಕಾಂಗ್ರೆಸ್ ಕಳೆದುಕೊಂಡಿದೆ..
ಹೀಗಾಗಿ ರಾಜ್ಯದಲ್ಲಿ ಜೆಡಿಎಸ್ ಎರಡೇ ಸ್ಥಾನ ಗಳಿಸಿದ್ದರೂ ಕೂಡಾ, ಉಳಿದಂತೆ ಐದು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲು ಅವಕಾಶ ಮಾಡಿಕೊಟ್ಟಿದೆ.. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಪ್ರಾಬ್ಯಲ್ಯ ಉಳಿಸಿಕೊಳ್ಳಲು ಜೆಡಿಎಸ್ ಕೊಡುಗೆ ಸಾಕಷ್ಟಿದೆ..