ಖ್ಯಾತ ಚಿತ್ರ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ!
ಕೇರಳ; ಮಳಯಾಳಂ ಚಿತ್ರರಂಗ ಖ್ಯಾತ ಚಿತ್ರ ನಿರ್ದೇಶಕನ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.. ಈ ಬಗ್ಗೆ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.. ʻಒರು ಅಡಾರ್ ಲವ್ʼ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಒಮರ್ ಲಲ್ಲು ವಿರುದ್ಧ ದೂರು ದಾಖಲಾಗಿದೆ..
ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ನಿರ್ದೇಶಕ ಒಮರ್ ಲಲ್ಲು ವಿರುದ್ಧ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ.. ಈ ಕೇಸನ್ನು ಈಗ ನಿಡುಂಬಸ್ಸೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ..
ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ನಿರ್ದೇಶಕರು ಹೇಳಿದ್ದರು.. ಅದಕ್ಕಾಗಿ ನನ್ನ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯ ಮಾಡಿ, ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆ ಮಹಿಳೆ ಆರೋಪ ಮಾಡಿದ್ದಾಳೆ.. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ನಿರ್ದೇಶಕ ಒಮರ್ ಲಲ್ಲು ಅವರು, ನನ್ನ ಘಟನೆ ಹಾಳು ಮಾಡೋದಕ್ಕೆ ಈ ರೀತಿಯ ಸುಳ್ಳು ಆರೋಪ ಮಾಡಲಾಗಿದೆ.. ಅವರ ಸಿನಿಮಾದಲ್ಲಿ ಅವಕಾಶ ನೀಡಲಿಲ್ಲ ಎಂಬ ಕಾರಕ್ಕೆ ಸುಳ್ಳು ದೂರು ಕೊಟ್ಟಿರಬಹುದು ಎಂದು ನಿರ್ದೇಶಕರು ಹೇಳಿದ್ದಾರೆ.. ಇನ್ನೊಂದೆಡೆ ಕೋರ್ಟ್‌ನಿಂದ ನಿರ್ದೇಶ ಒಮರ್ ಲಲ್ಲು ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ.. ಈ ಮೂಲಕ ಬಂಧನದ ಭೀತಿಯಿಂದ ಹೊರಬಂದಿದ್ದಾರೆ..