BengaluruCinema

ಚಿತ್ರ ನಿರ್ಮಾಣ ಮಾಡ್ತಿದ್ದಾರಂತೆ ನಟಿ ಮೇಘನಾ ರಾಜ್‌; ಚಿತ್ರ ಯಾವುದು ಗೊತ್ತಾ..?

ಬೆಂಗಳೂರು; ದಿವಂಗತ ನಟ ಚಿರಂಜೀವಿ ಸರ್ಜಾ ಪತ್ನಿ ಹಾಗೂ ನಟಿ ಮೇಘನಾ ರಾಜ್‌ ಚಿತ್ರ ನಿರ್ಮಾಣಕ್ಕಿಳಿದಿದ್ದಾರಂತೆ. ಪನ್ನಗಾಭರಣ ಅವರು ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಮೇಘನಾ ರಾಜ್‌ ಅವರೂ ಬಂಡವಾಳ ಹೂಡುತ್ತಿದ್ದಾರಂತೆ. ಈ ಚಿತ್ರದಲ್ಲಿ ಮೇಘನಾ ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಕೆಲ ತಿಂಗಳ ಹಿಂದೆ ಮೇಘನಾ ರಾಜ್‌ ಅವರು ಫೋಟೋ ಒಂದನ್ನು ಹಂಚಿಕೊಂಡಿಕೊ೦ಡಿದ್ದರು. ಈ ಫೋಟೋದಲ್ಲಿ ಪನ್ನಗಾಭರಣ, ವಿಶಾಲ್‌ ಹಾಘೂ ವಾಸುಕಿ ವೈಭವ್‌ ಜೊತೆ ಮೇಘನಾ ಇದ್ದರು. ಈ ಫೋಟೋ ಶೇರ್‌ ಮಾಡಿದ್ದ ಮೇಘನಾ ಹೊಸದೊಂದು ಸುದ್ದಿ ಕೊಡಲಿದ್ದೇನೆ ಎಂದು ಬರೆದುಕೊಂಡಿದ್ದರು. ಕೆಲ ದಿನಗಳ ನಂತರ ನಾವೆಲ್ಲರೂ ಒಟ್ಟಿಗೆ ಸಿನಿಮಾ ಒಂದನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಇತ್ತೀಚೆಗೆ ಮತ್ತೊಂದು ಫೋಟೋ ಹಂಚಿಕೊಂಡಿದ್ದ ಮೇಘನಾ, ಈ ಸಿನಿಮಾವನ್ನು ವಿಶಾಲ್ ನಿರ್ದೇಶನ ಮಾಡುತ್ತಿದ್ದು, ಪನ್ನಗಾಭರಣ ನಿರ್ಮಾಪಕರು ಎಂದು ಹೇಳಿದ್ದರು.

ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಪ್ರಮುಖ ಪಾತ್ರವನ್ನು ಮೇಘನಾ ರಾಜ್ ಅವರೇ ನಿರ್ವಹಿಸುತ್ತಿದ್ದಾರೆ. ವಾಸುಕಿ ವೈಭ‍ವ್ ಸಂಗೀತ ಸಂಯೋಜನೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಸದ್ಯ ಕಾಂತ ಕನ್ನಲ್ಲಿ ನಿರ್ದೇಶನದ ಸಿನಿಮಾದಲ್ಲಿ ಮೇಘನಾ ರಾಜ್ ನಟಿಸುತ್ತಿದ್ದು, ಈ ಸಿನಿಮಾದ ಬಹುತೇಕ ಶೂಟಿಂಗ್ ಮುಗಿಸಿದ್ದಾರಂತೆ. ಸದ್ಯದಲ್ಲೇ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

 

Share Post