Politics

ಚುನಾವಣೆಯ ನಂತರ ಸಂಪುಟ ತೊರೆಯುವ ಸಚಿವರು ಯಾರು ಯಾರು..?

ಬೆಂಗಳೂರು; ಈ ಬಾರಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್‌ ಪಕ್ಷ ತುಂಬಾನೇ ಗಂಭೀರವಾಗಿ ತೆಗೆದುಕೊಂಡಿತ್ತು.. ರಾಜ್ಯದಲ್ಲಿ ಅಧಿಕಾರದಲ್ಲಿದ್ದೇವೆ, ಜೊತೆಗೆ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದೇವೆ.. ಇದರಿಂದಾಗಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಬೇಕೆಂದು ಟಾರ್ಗೆಟ್‌ ಹಾಕಿಕೊಳ್ಳಲಾಗಿತ್ತು.. ಇದಕ್ಕಾಗಿ ಹತ್ತಕ್ಕೂ ಹೆಚ್ಚು ಸಚಿವರನ್ನು ಲೋಕಸಭಾ ಅಖಾಡಕ್ಕಿಳಿಸಲು ಚಿಂತನೆ ನಡೆದಿತ್ತು.. ಆದ್ರೆ ಯಾವ ಸಚಿವನೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಒಪ್ಪಿರಲಿಲ್ಲ.. ಹೀಗಾಗಿ, ಸಚಿವರಿಗೆ ಟಾಸ್ಕ್‌ ನೀಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು.. ಇಲ್ಲದಿದ್ದರೆ ಸಚಿವ ಸ್ಥಾನ ತೊರೆಯಬೇಕು ಎಂದು ಕಾಂಗ್ರೆಸ್‌ ಹೈಕಮಾಂಡ್‌ ಟಾಸ್ಕ್‌ ಕೊಟ್ಟಿತ್ತು ಎಂದು ಹೇಳಲಾಗಿತ್ತು.. ಹೀಗಾಗಿ ಫಲಿತಾಂಶದ ನಂತರ ಸಿದ್ದರಾಮಯ್ಯ ಸಂಪುಟಕ್ಕೆ ಸರ್ಜರಿಯಾಗುತ್ತಾ..? ಯಾರ್ಯಾರು ಸಂಪುಟದಿಂದ ಹೊರಹೋಗುತ್ತಾರೆ..? ಯಾರಿಗೆ ಅವಕಾಶ ಸಿಗುತ್ತೆ..? ಎಂಬುದರ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿವೆ..

ಇತ್ತೀಚೆಗೆ ಸಿದ್ದರಾಮಯ್ಯ ಅವರು ಮಾಧ್ಯಮ ಸಂವಾದದಲ್ಲಿ ಸಂಪುಟ ಸರ್ಜರಿ ವಿಚಾರವನ್ನು ಅಲ್ಲಗೆಳೆದಿದ್ದರು.. ಈ ನಡುವೆಊ ಕೆಲವರು ಸಂಪುಟ ಸರ್ಜರಿ ಬಗ್ಗೆ ಮಾತನಾಡುತ್ತಿದ್ದಾರೆ.. ಇನ್ನು ಪ್ರಚಾರದ ಸಮಯದಲ್ಲೂ ಕೆಲ ಸಚಿವರು ಭಾಷಣಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಿದೆ.. ನಾವು ಸಚಿವರಾಗಿ ಮುಂದುವರೆಯಬೇಕು ಅಂದ್ರೆ ಮತ ಹಾಕಿ ಎಂದೆಲ್ಲಾ ಹೇಳಿದ್ದಿದೆ.. ಸಿಎಂ ಸಿದ್ದರಾಮಯ್ಯ ಅವರು ಕೂಡಾ ನಾನು ಸಿಎಂ ಆಗಿ ಮುಂದುವರೆಯಬೇಕೋ ಬೇಡವೋ ಎಂದು ವರುಣಾದಲ್ಲಿ ಕೇಳಿದ್ದರು.. ಹೀಗಾಗಿ ಚುನಾವಣೆಯ ನಂತರ ಏನಾಗುತ್ತದೆ ಎಂಬುದರ ಬಗ್ಗೆ ಕುತೂಹಲ ಕೆರಳಿಸಿದೆ..

ಚುನಾವಣೆಗೂ ಮೊದಲು ದಲಿತ ಸಚಿವರು ಎಚ್ಚುವರಿ ಡಿಸಿಎಂಗಳ ಕೂಗು ಎಬ್ಬಿಸಿದ್ದರು.. ನಂತರ ಹೈಕಮಾಂಡ್‌ ನಾಯಕರು ಮಧ್ಯಪ್ರವೇಶ ಮಾಡಿದ್ದರಿಂದ ಅದು ತಣ್ಣಗಾಗಿತ್ತು.. ಹೀಗಾಗಿ, ಚುನಾವಣೆಯ ನಂತರ ಹೆಚ್ಚುವರಿ ಡಿಸಿಎಂಗಳ ನೇಮಕದ ಬಗ್ಗೆ ಮತ್ತೆ ಕೂಗು ಏಳುವ ಸಾಧ್ಯತೆ ಇದೆ.. ಇನ್ನು ಇದರ ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.. ಗೃಹ ಸಚಿವರ ಬದಲಾವಣೆಗಾಗಿ ಆಗ್ರಹಗಳು ಹೆಚ್ಚಾಗುತ್ತಿವೆ.. ಇನ್ನು ಎಸ್‌ಟಿ ಬೋರ್ಡ್‌ ಅವ್ಯವಹಾರ ಆರೋಪ ವಿಚಾರವಾಗಿಯೂ ವಿಪಕ್ಷಗಳ ಸರ್ಕಾರದ ವಿರುದ್ಧ ಮುಗಿಬಿದ್ದಿವೆ.. ಸಚಿವ ನಾಗೇಂದ್ರ ಅವರನ್ನು ವಜಾ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.. ಇತ್ತ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಹೇಳಿಕೆಗಳನ್ನು ನೀಡಲಾಗುತ್ತಿದೆ.. ಇದನ್ನೆಲ್ಲಾ ನೋಡುತ್ತಿದ್ದಾರೆ.. ಸಂಪುಟದಲ್ಲಿ ಬದಲಾವಣೆಯಾಗಬಹುದೇ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ..

ಇನ್ನೊಂದೆಡೆ ಒಂದಂಕಿಗಿಂತ ಕಡಿಮೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದರೆ ಸಚಿವ ಸಂಪಟಕ್ಕೆ ಮೇಜರ್‌ ಸರ್ಜರಿಯಾಗಬಹುದು ಎಂದೇ ಹೇಳಲಾಗುತ್ತಿದೆ.. ಒಂದು ವೇಳೆ ಒಂದಂಕಿ ದಾಟಿದರೆ ಸಂಪುಟದಲ್ಲಿ ಸಣ್ಣಪುಟ್ಟ ಬದಲಾವಣೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.. ಇನ್ನು ಕಾಂಗ್ರೆಸ್‌ ನಾಯಕರು 14 ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.. ಕಾಂಗ್ರೆಸ್‌ ನಾಯಕರು ಊಹಿಸಿದಂತೆ ಇಷ್ಟು ಸೀಟುಗಳು ಬಂದರೆ, ಬಹುತೇಕ ಸಚಿವರ ಸ್ಥಾನಗಳು ಉಳಿಯಲಿವೆ..

ಬಹುತೇಕ ಕಡೆ ಕಾಂಗ್ರೆಸ್‌ ಪಕ್ಷ ಸಚಿವರ ಸಂಬಂಧಿಗಳು ಹಾಗೂ ಮಕ್ಕಳಿಗೇ ಟಿಕೆಟ್‌ ನೀಡಿತ್ತು.. ನಿಮ್ಮವರಿಗೇ ಟಿಕೆಟ್‌ ಕೊಡಲಾಗಿದೆ.. ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮದು ಎಂದು ಹೇಳಲಾಗಿತ್ತು.. ಹೀಗಾಗಿ, ಹೀಗೆ ಟಿಕೆಟ್‌ ಪಡೆದುಕೊಂಡವರಲ್ಲಿ ಎಷ್ಟು ಜನ ಗೆಲ್ಲಬಹುದು ಎಂಬುದರ ಮೇಲೆ ಸಂಪುಟ ಪುನಾರಚಣೆ ನಿಂತಿದೆ ಎನ್ನಲಾಗ್ತಿದೆ..

 

Share Post