CrimePolitics

ಪೆನ್‌ಡ್ರೈವ್‌ ಪ್ರಕರಣಕ್ಕೂ ಭವಾನಿ ರೇವಣ್ಣಗೂ ಏನು ಲಿಂಕ್‌..?; ಪ್ರಜ್ವಲ್‌ ತಾಯಿಗೆ ಬಂಧನದ ಭೀತಿ ಯಾಕೆ..?

ಬೆಂಗಳೂರು; ಹಾಸನ ಪೆನ್‌ ಡ್ರೈವ್‌ ಪ್ರಕರಣ ಬಯಲಾಗುತ್ತಿದ್ದಂತೆ ಸಂಸದ ಪ್ರಜ್ವಲ್‌ ರೇವಣ್ಣ ದೇಶ ಬಿಟ್ಟು ಹೋಗಿದ್ದರು.. ಎಸ್‌ಐಟಿ ಅಧಿಕಾರಿಗಳು ಹವಲು ಬಾರಿ ನೋಟಿಸ್‌ ಜಾರಿ ಮಾಡಿದರೂ ಪ್ರಜ್ವಲ್‌ ಪತ್ತೆ ಇರಲಿಲ್ಲ.. ಇದೀಗ ವಿಡಿಯೋ ಹೇಳಿಕೆ ಕೊಟ್ಟಿರುವ ಪ್ರಜ್ವಲ್‌ ಮೇ 31ಕ್ಕೆ ಬೆಂಗಳೂರಿಗೆ ಬರುತ್ತೇನೆ.. ಅಂದೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.. ಈ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರಿಗೂ ಬಂಧನದ ಭೀತಿ ಎದುರಾಗಿದೆ.. ಮಗ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರುವುದಕ್ಕೂ, ಅದರ ಜೊತೆಗೆಯೇ ಭವಾನಿ ರೇವಣ್ಣ ಅವರಿಗೆ ಬಂಧನದ ಭೀತಿ ಎದುರಾಗುವುದಕ್ಕೂ ಸಂಬಂಧವೇನು ಎಂಬ ಪ್ರಶ್ನೆ ಎದ್ದಿದೆ..

ಈ ನಡುವೆ ಪ್ರಜ್ವಲ್‌ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರು ಮಧ್ಯಂತರ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.. ಇಂದು ಈ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.. ಇಂದು ನಿರೀಕ್ಷಣಾ ಜಾಮೀನು ಸಿಕ್ಕರೆ ಓಕೆ.. ಇಲ್ಲದಿದ್ದರೆ ಭವಾನಿ ರೇವಣ್ಣ ಕೂಡಾ ಬಂಧನವಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.. ನಿನ್ನೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದೆ.. ನಿನ್ನೆ ವಾದ ಮಂಡಿಸಿದ ಭವಾನಿ ಪರ ವಕೀಲರು, ಭವಾನಿ ರೇವಣ್ಣ ಅವರಿಗೆ ಯಾವ ನಿಯಮದಡಿ ನೋಟಿಸ್ ಕೊಟ್ಟಿದ್ದಾರೆ ಎಂಬುದನ್ನು ಎಸ್‌ಐಟಿ ಸ್ಪಷ್ಟವಾಗಿ ಹೇಳಿಲ್ಲ.. ಭವಾನಿ ರೇವಣ್ಣ ಅವರ ಬಂಧನದ ಅವಶ್ಯಕತೆಯೇನಿದೆ ಎಂದು ಗೊತ್ತಾಗುತ್ತಿಲ್ಲ.. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರ್ಟ್‌ ಮುಂದೆ ಮನವಿ ಮಾಡಿದ್ದಾರೆ.. ಈ ಬಗ್ಗೆ ಸಮಜಾಯಿಷಿ ನೀಡುವಂತೆ ಕೋರ್ಟ್‌ ಎಸ್‌ಐಟಿಗೆ ಸೂಚನೆ ನೀಡಿದೆ.. ಈ ಹಿನ್ನೆಲೆಯಲ್ಲಿ ಇಂದಿನ ಕೋರ್ಟ್‌ ಕಲಾಪ ಕುತೂಹಲಕ್ಕೆ ಕಾರಣವಾಗಿದೆ..

ಕೆಆರ್‌ ಪೇಟೆಯ ಸಂತ್ರಸಸ್ತೆ ಎನ್ನಲಾದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ ರೇವಣ್ಣ ಅವರನ್ನು ಬಂಧಿಸಲಾಗಿದ್ದು, ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.. ಇವರ ಜೊತೆಗೆ ಇನ್ನೂ ಏಳು ಮಂದಿಯನ್ನು ಈಗಾಗಲೇ ಬಂಧನ ಮಾಡಿ ವಿಚಾರಣೆ ಮಾಡಲಾಗಿದೆ.. ಇದರಲ್ಲಿ ಭವಾನಿ ರೇವಣ್ಣ ಕೂಡಾ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ.. ಅಪಹರಣಕ್ಕೀಡಾಗಿದ್ದರು ಎನ್ನಲಾದ ಮಹಿಳೆ ಭವಾನಿ ರೇವಣ್ಣ ಅವರ ಹೆಸರನ್ನೂ ತಮ್ಮ ಹೇಳಿಕೆಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗುತ್ತಿದೆ..

ಇನ್ನು ಈ ಅಪಹರಣ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಸತೀಶ್‌ ಬಾಬು ಮೊಬೈಲ್‌ ವಶಕ್ಕೆ ಪಡೆದಯಲಾಗಿದೆ.. ಆತನ ಕಾಲ್‌ ಡಿಟೇಲ್ಸ್‌ ನಲ್ಲಿ ಭವಾನಿ ರೇವಣ್ಣ ಅವರ ಜೊತೆ ಮಾತನಾಡಿರುವ ಕಾಲ್‌ ಲಿಸ್ಟ್‌ ಸಿಕ್ಕಿದೆ.. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರಿಗೆ ನೋಟಿಸ್‌ ನೀಡಿದ್ದಾರೆ.. ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ.. ಹೀಗಾಗಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಕಿಕೊಂಡಿದ್ದಾರೆ.. ಕೋರ್ಟ್‌ ಜಾಮೀನು ನಿರಾಕರಿಸಿದರೆ ಭವಾನಿ ರೇವಣ್ಣ ಕೂಡಾ ಬಂಧನವಾಗಬಹುದು ಎಂದು ಹೇಳಲಾಗುತ್ತಿದೆ..

 

Share Post