CrimeNational

ವಿದ್ಯಾರ್ಥಿನಿಯರೇ ಡೀಪ್‌ ಫೇಕ್‌ ಗ್ಯಾಂಗ್‌ ಟಾರ್ಗೆಟ್‌; ಹೆಣ್ಣು ಮಕ್ಕಳ ಪೋಷಕರೇ ಹುಷಾರ್‌..!

ಬೆಂಗಳೂರು; ವರ್ಷದ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಡಿಫ್‌ ಪೇಕ್‌ ಮೂಲಕ ವಿಡಿಯೋವೊಂದನ್ನು ಸೃಷ್ಟಿ ಮಾಡಲಾಗಿತ್ತು.. ಇತ್ತೀಚೆಗೆ ಕೂಡಾ ಯಾರೋ ವಾಟರ್‌ ಫಾಲ್ಸ್‌ ಕೆಳಗೆ ಸ್ನಾನ ಮಾಡುತ್ತಿದ್ದ ವಿಡಿಯೋಗೆ ರಶ್ಮಿಕಾ ಮಂದಣ್ಣರ ಮುಖ ಅಳವಡಿಸಿ ರಿಲೀಸ್‌ ಮಾಡಿದ್ದರು.. ಇದು ಹೀಗಿರುವಾಗಲೇ  ಡೀಪ್‌ ಫೇಕ್‌ ವಿಡಿಯೋ ತಯಾರಿಸುವವರ ಕಣ್ಣು ಕಾಲೇಜು ಹಾಗೂ ಹೈಸ್ಕೂಲ್‌ ವಿದ್ಯಾರ್ಥಿನಿಯರ ಮೇಲೆ ಬಿದ್ದಿದೆ.. ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ವಿದ್ಯಾರ್ಥಿನಿಯರು ಹಾಕುವ ಫೋಟೋಗಳು ಹಾಗೂ ವಿಡಿಯೋಗಳನ್ನು ಬಳಸಿಕೊಂಡು  ಡೀಪ್‌ ಫೇಕ್‌ ಟೆಕ್ನಾಲಜಿ ಬಳಸಿ ನಗ್ನ ಫೋಟೋ, ವಿಡಿಯೋಗಳನ್ನು ತಯಾರಿಸಲಾಗುತ್ತಿದೆ..

ಇತ್ತೀಚೆಗೆ  ಇನ್​ಸ್ಟಾ ಗ್ರೂಪ್​​​ ಒಂದರಲ್ಲಿ 9ನೇ ತರಗತಿ ವಿದ್ಯಾರ್ಥಿಗಳು ನಗ್ನ ಫೋಟೋ ವೈರಲ್ ಆಗಿದೆ… ಈ ಗ್ರೂಪ್‌ನಲ್ಲಿ ಬೆಂಗಳೂರು ನಗರದ ಸುಮಾರು 50 ವಿದ್ಯಾರ್ಥಿನಿಯರು ಇದ್ದರು.. ಡೀಪ್‌ ಫೇಕ್‌ ತಂತ್ರಜ್ಞಾನ ಬಳಸ ವಿದ್ಯಾರ್ಥಿಯ ಫೋಟೋವನ್ನು ನಗ್ನವಾಗಿ ಚಿತ್ರಿಸಲಾಗಿದೆ.. ಇದು ನೋಡೋರಿಗೆ ಜಿನವಾದ ಫೊಟೋ ಎಂದೇ ಅನಿಸುತ್ತದೆ.. ಇದನ್ನು ನೋಡಿ ಆತಂಕಗೊಂಡ ವಿದ್ಯಾರ್ಥಿನಿ ಫೋಷಕರಿಗೆ ಮಾಹಿತಿ ನೀಡಿದ್ದಳು.. ಕೂಡಲೇ  ಪಾಲಕರು ಸೈಬರ್​ ಸೆಲ್​ಗೆ ದೂರು ಕೊಟ್ಟಿದ್ದಾರೆ..

ಗ್ರೂಪ್‌ನಲ್ಲಿದ್ದವರೇ ಈ ಡೀಪ್‌ ಫೇಕ್‌ ಫೋಟೋ ತಯಾರಿಸಿರುವ ಅನುಮಾನ ಇದೆ ಎಂದು ಹೇಳಲಾಗುತ್ತಿದೆ.. ಇಂತಹ ಘಟನೆಗಳಿಂದ ವಿದ್ಯಾರ್ಥಿನಿಯರ ಭವಿಷ್ಯವನ್ನು ಕತ್ತಲಕೂಪಕ್ಕೆ ತಳ್ಳಲ್ಪಡುತ್ತದೆ.. ಹೀಗಾಗಿ, ಪೋಷಕರು ಈ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು.. ಆದಷ್ಟು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಮಕ್ಕಳು ಫೋಟೋಗಳನ್ನು ಅಪ್‌ಲೋಡ್‌ ಮಾಡದಂತೆ ನೋಡಿಕೊಂಡರೆ ಒಳ್ಳೆದು.. ಇನ್ನು ಪೊಲೀಸರು ಹಾಗೂ ಸರ್ಕಾರ ಕೂಡಾ ಈ ಡೀಪ್‌ ಫೇಕ್‌ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ..

 

Share Post