CrimeDistricts

ಕಚ್ಚಿದ ಹಾವಿನ ಜೊತೆ ಆಸ್ಪತ್ರೆಗೆ ಬಂದ ಯುವಕ; ಆಸ್ಪತ್ರೆ ಸಿಬ್ಬಂದಿಗೆ ಶಾಕ್‌!

ಬೆಳಗಾವಿ; ಯುವಕನೋರ್ವನಿಗೆ ಹಾವು ಕಚ್ಚಿದ್ದು, ನಂತರ ಆ ಹಾವನ್ನು ಹಿಡಿದ ಯುವಕ ಅದರೊಂದಿಗೆ ಆಸ್ಪತ್ರೆಗೆ ಬಂದಿದ್ದಾನೆ.. ಇದನ್ನು ನೋಡಿ ಆಸ್ಪತ್ರೆ ಸಿಬ್ಬಂದಿಯೇ ಬೇಸ್ತು ಬಿದ್ದಿದ್ದಾರೆ.. ಬೆಳಗಾವಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.. ಬೆಳಗಾವಿ ತಾಲೂಕಿನ ಹುಂಚ್ಯಾನಹಟ್ಟಿ ಗ್ರಾಮದ ಯುವಕನಿಗೆ ಹಾವು ಕಚ್ಚಿದ್ದು, ಆತ ಹಾವನ್ನು ಹಿಡಿದು ಒಂದು ಪ್ಲಾಸ್ಟಿಕ್‌ ಕವರ್‌ಗೆ ಹಾಕಿಕೊಂಡಿದ್ದಾನೆ.. ಅದರ ಜೊತೆ ಬೆಳಗಾವಿಯ ಬಿಮ್ಸ್‌ ಆಸ್ಪತ್ರೆಗೆ ಬಂದಿದ್ದಾನೆ..

ಹುಂಚ್ಯಾನಹಟ್ಟಿ ಗ್ರಾಮದ 21 ವರ್ಷದ ಯುವಕ ಶಾಹಿದ್‌ ಎಂಬಾತನೇ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕನಾಗಿದ್ದಾರೆ.. ಈತನ ಮನೆಯ ಬಳಿ ಹಾವೊಂದು ಬಂದಿತ್ತು.. ಆದನ್ನು ಹಿಡಿದು ಬೆಟ್ಟದ ಬಳಿ ಬಿಡಲು ಹೋಗಿದ್ದಾನೆ.. ಈ ವೇಳೆ ಹಾವು ಶಾಹಿದ್‌ಗೆ  ಕಚ್ಚಿದೆ.. ಹೀಗಾಗಿ ವೈದ್ಯರಿಗೆ ಹಾವು ಯಾವುದು ಎಂಬುದು ಗೊತ್ತಾದರೆ ಚಿಕಿತ್ಸೆ ಸುಲಭವಾಗುತ್ತೆ ಅನ್ನೋ ಕಾರಣಕ್ಕೆ ಆತ ಹಾವನ್ನು ಮತ್ತೆ ಸೆರೆ ಹಿಡಿದಿದ್ದಾನೆ.. ಅದನ್ನು ಕವರ್‌ ನಲ್ಲಿ ಹಾಕಿ ನಂತರ ಅದನ್ನು ಒಂದು ಡಬ್ಬಿಗೆ ಹಾಕಿಕೊಂಡಿದ್ದಾನೆ.. ಅದರೊಂದಿಗೆ ಆಸ್ಪತ್ರೆಗೆ ಬಂದಿದ್ದಾನೆ.. ವೈದ್ಯರಿಗೆ ತೆಗೆದು ಹಾವನ್ನು ತೋರಿಸಿದ್ದಾನೆ.. ಈ ವೇಳೆ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಹೌಹಾರಿದ್ದಾರೆ..

ಜೀವಂತ ಹಾವನ್ನೇ ಶಾಹಿದ್‌ ಆಸ್ಪತ್ರೆಗೆ ತಂದಿದ್ದ.. ನಂತರ ಚಿಕಿತ್ಸೆ ಪಡೆದುಕೊಂಡು, ಶಾಹಿದ್‌ ಹಾವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾನೆ.. ಅನಂತರ ಬೈಕ್‌ನಲ್ಲಿ ಮನೆಗೆ ವಾಪಸ್ಸಾಗಿದ್ದಾನೆ.. ಶಾಹಿದ್‌ ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ..

 

Share Post