AstrologyLifestyle

ಈ ವಸ್ತುಗಳನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಟ್ಟರೆ ಶುಭವಾಗುತ್ತದೆ..?; ದಿಕ್ಕು ಬದಲಿಸಿದರೆ ಅಶುಭವಾಗುತ್ತಾ..?

ಇತ್ತೀಚೆಗೆ ಜನರು ಮನೆಯ ವಾಸ್ತು ಕಡೆಗೆ ಹೆಚ್ಚಿನ ಗಮನ ಕೊಡುತ್ತಾರೆ.. ವಾಸ್ತು ತಜ್ಞರ ಸಲಹೆ ಪಡೆದುಕೊಂಡೇ ಮನೆ ನಿರ್ಮಾಣ ಮಾಡುತ್ತಾರೆ.. ವಾಸ್ತು ಪ್ರಕಾರ ಮನೆ ಇಲ್ಲದಿದ್ದರೆ ಕೆಡಕಾಗುತ್ತದೆ ಎಂಬ ನಂಬಿಕೆ ಬಹುತೇಕ ಜನರಲ್ಲಿದೆ.. ಬರೀ ಮನೆ ಮಾತ್ರ ವಾಸ್ತು ಪ್ರಕಾರ ಕಟ್ಟಿದರೆ ಸಾಕಾಗೋದಿಲ್ಲ.. ಬದಲಾಗಿ ಮನೆಯಲ್ಲಿ ಇರಿಸುವ ವಸ್ತುಗಳು, ಅವುಗಳನ್ನು ಇರಿಸಬೇಕಾದ ದಿಕ್ಕು ಕೂಡಾ ಇಂಪಾರ್ಟೆಂಟ್‌ ಅಂತಾರೆ ವಾಸ್ತು ತಜ್ಞರು.. ಸಾಕಷ್ಟು ಜನರು ಮನೆಯಲ್ಲಿ ಹಲವಾರು ರೀತಿಯ ಸಸ್ಯಗಳನ್ನು ಇರಿಸುತ್ತಾರೆ. ಫೆಂಗ್‌ ಶೂಯಿಯಂತಹ ವಸ್ತುಗಳನ್ನು ಕೂಡಾ ತಂದಿರಿಸುತ್ತಾರೆ.. ಇವುಗಳಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಿರುತ್ತಾರೆ.. ಆದ್ರೆ ಈ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಅನ್ನೋದು ತುಂಬಾ ಜನಕ್ಕೆ ಗೊತ್ತಿರೋದಿಲ್ಲ.. ಹೀಗಾಗಿ ಯಾವ ವಸ್ತುವನ್ನು ಎಲ್ಲಿಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..

ಆಮೆ ಪ್ರತಿಮೆ;

ಮನೆಯಲ್ಲಿ ಆಮೆಯ ಮೂರ್ತಿಯನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.. ಆಮೆಯನ್ನು ಸ್ಥಿರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.. ಮನೆಯಲ್ಲಿ ಯಾವುದೇ ರೂಪದಲ್ಲಿ ಉತ್ತರ ದಿಕ್ಕಿನಲ್ಲಿ ಆಮೆಯ ಮೂರ್ತಿಯನ್ನು ಇಡುವುದು ಶುಭ ಸಂಕೇತ ಎಂದು ವಾಸ್ತು ತಜ್ಞರು ಹೇಳುತ್ತಾರೆ… ಹೀಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ, ನಿರುದ್ಯೋಗಿಗಳಿಗೆ ಬಹುಬೇಗ ಉದ್ಯೋಗ ಸಿಗುತ್ತದೆ..

ವಿಂಡ್ ಚೈಮ್;

ಮನೆಯಲ್ಲಿ ವಿಂಡ್ ಚೈಮ್ ಇರಿಸಿದರೆ ನಮ್ಮ ಜೀವನ ಸುಖಕರವಾಗಿರುತ್ತದೆ.. ಈ ವಿಂಡ್ ಚೈಮ್ ನಿಂದ ಚಿಲಿಪಿಲಿ ಸದ್ದು ಕಿವಿಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಮನಸ್ಸಿಗೆ ಆನಂದವನ್ನು ತರುತ್ತದೆ. ನಮ್ಮ ಮನೆಯ ವಾತಾವರಣದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.. ವಾಸ್ತು ಪ್ರಕಾರ ವಿಂಡ್ ಚೈಮ್ಸ್ ಯಶಸ್ಸು ಮತ್ತು ಸಂತೋಷದ ಸಂಕೇತವಾಗಿದೆ ಎಂದು ತಜ್ಞರು ಹೇಳುತ್ತಾರೆ..

ಅದೃಷ್ಟದ ಗಿಡ;

ಮನೆ ಮಾತ್ರವಲ್ಲದೆ ಕಚೇರಿಯಲ್ಲೂ ಸೌಂದರ್ಯಕ್ಕಾಗಿ ಹಲವಾರು ಗಿಡಗಳನ್ನು ಬೆಳೆಸಲಾಗುತ್ತದೆ… ಅದೃಷ್ಟದ ಸಸ್ಯ ಕೂಡಾ ಅದರಲ್ಲೊಂದು.. ಇತ್ತೀಚೆಗೆ ಈ ಗಿಡವನ್ನು ಬಹುತೇಕ ಮನೆಗಳಲ್ಲಿ ತಂದಿಡುತ್ತಿದ್ದಾರೆ.. ಕಚೇರಿಗಳಲ್ಲೂ ಅಲ್ಲಲ್ಲಿ ಇದನ್ನು ಕಾಣಬಹುದು.. ಅನೇಕ ಜನರು ಈ ಅದೃಷ್ಟದ ಬಿದಿರಿನ ಸಸ್ಯವನ್ನು ಮನೆಯಲ್ಲಿ ಇಡುತ್ತಾರೆ.. ಆದರೆ ಈ ಗಿಡವನ್ನು ವಾಸ್ತು ಪ್ರಕಾರ ಇಡಬೇಕು.. ಅದೃಷ್ಟದ ಬಿದಿರಿನ ಗಿಡವನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ.. ಮನೆಗೆ ಹಾಗೂ ಮನೆಯಲ್ಲಿರುವವರಿಗೆ ಶುಭವಾಗಲಿದೆ.. ಮನೆಯಲ್ಲಿ ವಾಸಿಸುವವರಿಗೆ ರೀತಿಯ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ..

ಪಿರಮಿಡ್;

ಫೆಂಗ್ ಶೂಯಿ ಪಿರಮಿಡ್ ಅನ್ನು ವಾಸ್ತು ಪ್ರಕಾರ ಮನೆಯಲ್ಲಿ ಇಡಬೇಕು. ಇದನ್ನು ಮನೆಯ ಮಧ್ಯ ಭಾಗದಲ್ಲಿ ಜೋಡಿಸಿದರೆ ಮನೆಯಲ್ಲಿ ವಾಸಿಸುವವರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ.. ಶಾಂತಿ ಮನೆಯಲ್ಲಿ ನೆಲೆಸುತ್ತದೆ..  ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ.. ಪಿರಮಿಡ್ ಶಕ್ತಿ ಮತ್ತು ಸ್ಥಿರತೆಯ ಸಂಕೇತವಾಗಿದೆ.. ಆದ್ದರಿಂದ ಫೆಂಗ್ ಶೂಯಿ ಪಿರಮಿಡ್ ಅನ್ನು ಮನೆಯ ಮಧ್ಯಭಾಗದಲ್ಲಿ ಇರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಡ್ರ್ಯಾಗನ್ ಆಮೆ;

ಡ್ರ್ಯಾಗನ್ ಆಮೆ.. ಇದು ಆಮೆ ಮತ್ತು ಡ್ರ್ಯಾಗನ್ ಸಂಯೋಜನೆಯಲ್ಲಿ ಕಂಡುಬರುತ್ತದೆ…  ವಾಸ್ತು ಪ್ರಕಾರ ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು. ಡ್ರ್ಯಾಗನ್ ಆಮೆ ಗುರುತ್ವಾಕರ್ಷಣೆಯ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಆದ್ದರಿಂದ ಡ್ರ್ಯಾಗನ್ ಆಮೆಯನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಮನೆಯ ಕುಟುಂಬ ಸದಸ್ಯರು ಹಣದ ಕೊರತೆಯನ್ನು ಎದುರಿಸುವುದಿಲ್ಲ.. ಮನೆಯವರಿಗೆ ಇದು ಅದೃಷ್ಟವನ್ನು ತಂದುಕೊಡುತ್ತದೆ..

ಲಾಫಿಂಗ್ ಬುದ್ಧ;

ಇಂದಿನ ದಿನಗಳಲ್ಲಿ ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಇಡಲು ಹೆಚ್ಚು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಮನೆಯಲ್ಲಿ ಇದನ್ನು ಇಟ್ಟರೆ ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇದನ್ನು ಮನೆಯ ಲಿವಿಂಗ್ ರೂಮಿನಲ್ಲಿ ಇಟ್ಟರೆ ಒಳ್ಳೆಯದು.. ಈ ಕೋಣೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮನೆಯ ಹಾಲ್ ನಲ್ಲಿ ಲಾಫಿಂಗ್ ಬುದ್ಧ ಇರಿಸುವುದು ಉತ್ತಮ. ಹೀಗೆ ಮಾಡುವುದರಿಂದ ಮನೆಯಲ್ಲಿ ಶಾಂತಿ, ಸೌಹಾರ್ದತೆ ಮೂಡುತ್ತದೆ ಎಂಬ ನಂಬಿಕೆ ಇದೆ.

 

Share Post