ಲೋಕಸಭಾ ಆಂತರಿಕ ಸಮೀಕ್ಷೆ; ಬಿಜೆಪಿ ಲೆಕ್ಕ ಎಷ್ಟು, ಕಾಂಗ್ರೆಸ್ ಲೆಕ್ಕ ಎಷ್ಟು?
ಬೆಂಗಳೂರು; ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನು ಕೆಲವೇ ದಿನ ಬಾಕಿ ಇದೆ… ಈಗಾಗಲೇ ಯಾರಿಗೆ ಎಷ್ಟು ಸ್ಥಾನ ಬರಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ.. ರಾಜ್ಯದ 28 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು ಬರಬಹುದು ಅನ್ನೋದರ ಬಗ್ಗೆ ಚರ್ಚೆ ನಡೆದಿದೆ.. ಇತ್ತ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಆಂತರಿಕ ಸಮೀಕ್ಷೆ ನಡೆಸಿವೆ.. ಇದರಲ್ಲಿ ಯಾರಿಗೆ ಎಷ್ಟು ಸ್ಥಾನ ಬರಬಹುದು..? ಯಾರ ಲೆಕ್ಕ ಎಷ್ಟು? ನೋಡೋಣ..
ಕಾಂಗೇಸ್ ಆಂತರಿಕ ಸಮೀಕ್ಷೆ ಏನು?
ರಾಜ್ಯದ 28 ಕ್ಷೇತ್ರಗಳಲ್ಲಿ ಪೈಕಿ ಕಾಂಗ್ರೆಸ್ ಗೆ ಎಷ್ಟು ಸ್ಥಾನ ಬರಬಹುದು ಎಂದು ಕಾಂಗ್ರೆಸ್ ಆಂತರಿಕ ಸಮೀಕ್ಷೆ ಮಾಡಿದೆ.. ಇದರ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಗೆ 14 ಸ್ಥಾನ ಬರಲಿದೆ.. ಉಳಿದ 14 ಸ್ಥಾನಗಳು NDA ಗೆ ಬರಲಿವೆ.. ಇದರಲ್ಲಿ ಕೆಲಸ ಕ್ಷೇತ್ರಗಲ್ಲಲಿ 50-50 ಚಾನ್ಸೆಸ್ ಇದೆ ಅನ್ನೋದು ಕಾಂಗ್ರೆಸ್ ಲೆಕ್ಕ..
ಬಿಜೆಪಿ ಆಂತರಿಕ ಸಮೀಕ್ಷೆ ಲೆಕ್ಕಾಚಾರ ಏನು?
ಬಿಜೆಪಿ ನಾಯಕರು ಕೂಡ ಭೂತ ಮಟ್ಟದ ಸಮೀಕ್ಷೆ ಮಾಡಿ ಬಿಜೆಪಿ ಹಾಗೂ ಜೆಡಿಎಸ್ ಗೆ ಎಷ್ಟು ಸ್ಥಾನ ಬರಬಹುದು ಎಂದು ಲೆಕ್ಕ ಹಾಕಿದ್ದಾರೆ.. ಬಿಜೆಪಿ ನಾಯಕರ ಆಂತರಿಕ ಸಮ್ಮೇಕ್ಷೆ ಪ್ರಕಾರ ಬಿಜೆಪಿ ಹಾಗೂ ಜೆಡಿಎಸ್ ಒಕ್ಕೂಟಕ್ಕೆ 17 ಸೀಟು ಬರಲಿವೆ.. ಇನ್ನು 5 ಕ್ಷೇತ್ರಗಳಲ್ಲಿ 50-50 ಚಾನ್ಸೆಸ್ ಇದೆಯಂತೆ.. ಬಿಜೆಪಿ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಗೆ 6 ಸ್ಥಾನಗಳು ಪಕ್ಕಾ.. 5 ಕ್ಷೇತ್ರಗಳು 50-50 ಚಾನ್ಸೆಸ್ ಇರೋದ್ರಿಂದ ಕಾಂಗ್ರೆಸ್ ಗೆ ಸೀಟುಗಳು ಇನ್ನು ಹೆಚ್ಚಾಗಬಹುದು..