ಗೇಮಿಂಗ್ ಝೋನ್‌ನಲ್ಲಿ ಅಗ್ನಿ ದುರಂತ; ಸಾವಿನ ಸಂಖ್ಯೆ 32ಕ್ಕೆ ಏರಿಕೆ!
ಗಾಂಧಿನಗರ; ಮಕ್ಕಳ ವೀಕೆಂಡ್ ಎಂಜಾಯ್ ಮಾಡಲು ಗೇಮಿಂಗ್ ಝೋನ್ ಬಂದಿದ್ದವರಿಗೆ ಮಸಣ ಸೇರುತ್ತೇವೆ ಎಂಬ ಅರಿವು ಇರಲಿಲ್ಲ.. ಖುಷಿ ಕೊಡಬೇಕಾದ ಸ್ಥಳ ಈಗ ಸಂಬಂಧಿಗಳಿಗೆ ದುಃಖ ಕೊಟ್ಟಿದೆ.. ನಿನ್ನೆ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 32 ಕ್ಕೆ ಏರಿದೆ.. ಇದರಲ್ಲಿ 9 ಮಕ್ಕಳು ಕೂಡಾ ಸೇರಿದ್ದಾರೆ.. ಎಲ್ಲರ ದೇಹಗಳೂ ಸುಟ್ಟು ಮುದ್ದೆಯಂತಾಗಿವೆ.. ಇದರಿಂದಾಗಿ ಯಾರ ದೇಹಗಳು ಎಂಬುದನ್ನು ಕೂಡಾ ಪತ್ತೆ ಹಚ್ಚೋದಕ್ಕೆ ಆಗುತ್ತಿಲ್ಲ.. ಡಿಎನ್‌ಎ ಪರೀಕ್ಷೆ ನಡೆಸಿ ಆ ಮೂಲಕ ದೇಹಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ..
ಗುಜರಾತ್‌ನ ರಾಜ್‌ಕೋಟ್‌ನ ಗೇಮಿಂಗ್ ಜೋನ್‌ನಲ್ಲಿ ಶನಿವಾರ ಮಧ್ಯಾಹ್ನ ಟಿಆರ್‌ಪಿ ಗೇಮಿಂಗ್ ವಲಯದಲ್ಲಿ ಎಸಿ ಸ್ಫೋಟಗೊಂಡು ಈ ದುರಂತ ನಡೆದಿದೆ.. ಭಾರೀ ಸ್ಫೋಟದಿಂದ ದೊಡ್ಡ ಅಗ್ನಿ ಅನಾಹುತ ನಡೆದಿದ್ದು, ಇದುವರೆಗೆ 32 ಮಂದಿ ಸಾವನ್ನಪ್ಪಿದ್ದಾರೆ.. 65ಕ್ಕೂ ಹೆಚ್ಚು ಜನರಿಗೆ ತೀವ್ರವಾಗಿ ಸುಟ್ಟು ಗಾಯಗಳಾಗಿವೆ.. ಎಲ್ಲರನ್ನೂ ವಿವಿಧ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ..
ಸುಟ್ಟು ಹೋದವರ ಮೃತದೇಹಗಳನ್ನು ಬೆಡ್ಶೀಟ್ ಹಾಗೂ ಮೂಟೆಯಲ್ಲಿ ಕಟ್ಟಿ ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಗಿದೆ.. ಎಲ್ಲಾ ದೇಹಗಳು ಮಾಂಸದ ಮುದ್ದೆಗಳಂತಾಗಿವೆ.. ಸರ್ಕಾರ ಮೃತರ ಸಂಬಂಧಿಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ..