DistrictsLifestyle

ಸಿದ್ದರಾಮಯ್ಯ ಅವರಿಗೂ ಲವ್‌ ಆಗಿತ್ತಂತೆ..!; ಹುಡುಗಿ ಒಪ್ಪಲಿಲ್ಲ, ಯಾಕೆ ಗೊತ್ತಾ..?

ಮೈಸೂರು; ಖಾಸಗಿ ವಾಹಿನಿಯೊಂದರೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನಿಮಗೆ ಓದುವಾಗ ಯಾರ ಮೇಲಾದರೂ ಲವ್‌ ಆಗಿತ್ತಾ ಎಂದು ಕೇಳಿದ್ದರು.. ಆಗ ಸಿದ್ದರಾಮಯ್ಯ ಅವರು ಇಲ್ಲ ಎಂದೇ ಹೇಳಿದ್ದರು.. ಆದ್ರೆ ಇದೀಗ ಸಿದ್ದರಾಮಯ್ಯ ಅವರು ಒಂದು ಹುಡುಗಿ ಮೇಲೆ ಮೋಹಗೊಂಡಿದ್ದ ವಿಷಯವನ್ನು ಬಿಚ್ಚಿಟ್ಟಿದ್ದಾರೆ.. ಹುಡುಗಿಯೊಬ್ಬಳನ್ನು ಇಷ್ಟಪಟ್ಟಿದ್ದೆ, ಮದುವೆಯಾಗಬೇಕು ಎಂದಿದ್ದೆ.. ಆದ್ರೆ ಆ ಹುಡುಗಿ ಹಾಗೂ ಆಕೆಯ ಮನೆಯವರು ಒಪ್ಪಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ..

ಮೈಸೂರಿನ ಜನ ಸ್ಪಂದನ ಮತ್ತು ಮಾನವ ಮಂಟಪ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆ ಕಾರ್ಯಕ್ರಮ ಆಯೋಜಿಸಿತ್ತು.. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದರು.. ಈ ವೇಳೆ ಮಾತನಾಡಿರುವ ಅವರು, ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು.. ಕಾನೂನು ಪದವಿ ಓದುವಾಗ ನಾನು ಬೇರೆ ಜಾತಿಯ ಸ್ನೇಹಿತೆಯನ್ನು ಮದುವೆ ಆಗಬೇಕು ಎಂದುಕೊಂಡಿದ್ದೆ.. ಈ ಬಗ್ಗೆ ಆಕೆಗೆ ತಿಳಿಸಿದ್ದೆ, ಆದ್ರೆ ಆಕೆ ನನ್ನನ್ನು ಮದುವೆಯಾಗಲು ಒಪ್ಪಲಿಲ್ಲ.. ಅವರ ಮನೆಯವರು ಕೂಡಾ ಇದಕ್ಕೆ ಒಪ್ಪಲಿಲ್ಲ ಎಂದು ಹೇಳಿದ್ದಾರೆ..

ಆ ಹುಡುಗಿ ಹಾಗೂ ಆಕೆಯ ಮನೆಯವರು ಒಪ್ಪಲಿಲ್ಲ.. ಈ ಕಾರಣಕ್ಕಾಗಿ ನಾನು ಅಂತರ್ಜಾತಿ ವಿವಾಹದ ಆಸೆಯನ್ನು ಕೈಬಿಟ್ಟೆ.. ಅನಿವಾರ್ಯವಾಗಿ ನಮ್ಮ ಜನಾಂಗದ ಹುಡುಗಿಯನ್ನೇ ಮದುವೆಯಾಗಬೇಕಾಯಿತು ಎಂದು ಸಿದ್ದರಾಮಯ್ಯ ಅವರು ಕಾಲೇಜು ದಿನಗಳ ಲವ್‌ ಸ್ಟೋರಿಯನ್ನು ಮೆಲುಕು ಹಾಕಿದರು.. ಅಂತರ್ಜಾತಿ ವಿವಾಹಗಳಿಂದ ಜಾತಿ ವಿನಾಶ ಸಾಧ್ಯ.. ಅಂತರ್ಜಾತಿ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು..

 

Share Post