CinemaPolitics

ಭಾರತದ ಪೌರತ್ವ ಪಡೆದ ನಂತರ ಮೊದಲ ಮತ ಚಲಾಯಿಸಿದ ನಟ ಅಕ್ಷಯ್‌ ಕುಮಾರ್‌!

ಮುಂಬೈ; ಬಾಲಿವುಡ್‌ ಖ್ಯಾತ ನಟ ಅಕ್ಷಯ್‌ ಕುಮಾರ್‌ ಇಂದು ಮುಂಬೈನಲ್ಲಿ ಮತದಾನ ಮಾಡಿದ್ದಾರೆ.. ಇವರು ಭಾರತದ ಪೌರತ್ವ ಪಡೆದ ಮೇಲೆ ಚಲಾಯಿಸುತ್ತಿರುವ ಮೊದಲ ಮತ ಇದು. ಹೀಗಾಗಿ ಅದರ ಖುಷಿಯನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ..
ಬಾಲಿವುಡ್‌ನ ಖ್ಯಾತ ನಟ ಅಕ್ಷಯ್‌ ಕುಮಾರ್‌ ಅವರು ಕೆನಡಾ ಪೌರತ್ವ ಹೊಂದಿದ್ದರು.. ಇದೀಗ ಅವರು ಸಿಎಎ ಅಡಿಯಲ್ಲಿ ಭಾರತದ ಪೌರತ್ವ ಪಡೆದಿದ್ದಾರೆ.. ಭಾರತದ ಪೌರತ್ವ ಪಡೆದ ಮೇಲೆ ಅವರು ಮೊದಲ ಬಾರಿಗೆ ಮತ ಚಲಾವಣೆ ಮಾಡಿದ್ದಾರೆ.. ಇದಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.. ‘ನಮ್ಮ ಭಾರತ ಅಭಿವೃದ್ಧಿ ಹೊಂದಬೇಕು, ಬಲಿಷ್ಠಗೊಳ್ಳಬೇಕು. ಅದನ್ನು ಮನಸ್ಸಲ್ಲಿ ಇಟ್ಟುಕೊಂಡು ವೋಟ್ ಮಾಡಿದ್ದೇನೆ. ಒಳ್ಳೆಯ ರೀತಿಯಲ್ಲಿ ಮತದಾನ ಆಗುತ್ತದೆʼ ಎಂದು ಅಕ್ಷಯ್‌ ಕುಮಾರ್‌ ಹೇಳಿದ್ದಾರೆ.
ಇದು ಐದನೇ ಹಂತದ ಮತದಾನ ನಡೆಯುತ್ತಿದೆ.. ಎಂಟು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಮತದಾನ ನಡೆಯುತ್ತಿದೆ.. ಮುಂಬೈನಲ್ಲೂ ಕೂಡಾ ಇಂದು ಮತದಾನ ನಡೆಯುತ್ತಿದೆ..

Share Post