CrimeNationalPolitics

5 ಸಾವಿರ ರೂಪಾಯಿ ಪಡೆದು ಮತ ಹಾಕಿದ ಸಬ್‌ ಇನ್ಸ್‌ಪೆಕ್ಟರ್‌; ಸಿಕ್ಕಿಬಿದ್ದಿದ್ದೇ ರೋಚಕ!

ಅಮರಾವತಿ; ಚುನಾವಣೆಯಲ್ಲಿ ಅಕ್ರಮಗಳು ಭರ್ಜರಿಯಾಗಿ ನಡೆಯುತ್ತವೆ.. ಮತದಾರರಿಗೆ ಹಣ ಕೊಟ್ಟು ಮತಗಳನ್ನು ಕೊಂಡುಕೊಳ್ಳಲಾಗುತ್ತದೆ.. ಇಂತಹ ಅಕ್ರಮಗಳನ್ನು ತಡೆಯೋದಕ್ಕಾಗಿಯೇ ಪೊಲೀಸರಿದ್ದಾರೆ.. ಆದ್ರೆ ಅದೇ ಪೊಲೀಸರು ಕೂಡಾ ಮತಗಳನ್ನು ಮಾರಿಕೊಂಡರೆ ಏನಾಗಬೇಡಾ..? ಹೌದು, ಇಲ್ಲಿ ನಡೆದಿರೋದು ಕೂಡಾ ಇದೇ.. ಆಂಧ್ರಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ವಿಧಾನಸಭೆ ಹಾಗು ಲೋಕಸಭೆಗೆ ಚುನಾವಣೆ ನಡೆದಿದೆ.. ಈ ವೇಳೆ ಅಂಚೆ ಮತ ಮಾರಾಟ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶದ ಮಂಗಳಗಿರಿ ಸಬ್‌ ಇನ್ಸ್‌ಪೆಕ್ಟರ್‌ ಅವರನ್ನು ಅಮಾನತು ಮಾಡಲಾಗಿದೆ..

ಗುಂಟೂರು ಜಿಲ್ಲೆ ಮಂಗಳಗಿರಿ ಪಟ್ಟಣ ಠಾಣೆಯಲ್ಲಿ ಎಸ್‌ಐ ಆಗಿ ಕೆಲಸ ಮಾಡುತ್ತಿರುವ ಖಾಜಾಬಾಬು ಎಂಬುವವರು ತಮ್ಮ ಸಂಬಂಧಿಕರ ಮೂಲಕ ಪಕ್ಷವೊಂದರ ಮುಖಂಡರೊಬ್ಬರ ಬಳಿಯಿಂದ 5 ಸಾವಿರ ರೂಪಾಯಿ ಪಡೆದು ಅಂಚೆ ಮತ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.. ಈ ಹಿನ್ನೆಲೆಯಲ್ಲಿ ಎಸ್‌ಐ ಖಾಜಾಬಾಬು ಅವರನ್ನು ಅಮಾನತು ಮಾಡಿ ಐಜಿ ಆದೇಶ ಹೊರಡಿಸಿದ್ದಾರೆ..

ಪ್ರಕಾಶಂ ಜಿಲ್ಲೆ ಕುರಿಚೇಡು ಗ್ರಾಮದ ಖಾಜಾಬಾಬು ಈಗ ಮಂಗಳಗಿರಿಯಲ್ಲಿ ಕೆಲಸ ಮಾಡುತ್ತಿದ್ದಾರೆ… ಇನ್ನು ಚುನಾವಣೆಗೂ ಮೊದಲು ಅಂಚೆ ಮತದಾನ ನಡೆಯುವುದಕ್ಕೂ ಮುಂಚಿನ ದಿನ ಹಣ ಹಂಚುವ ವೇಳೆ ಪಕ್ಷವೊಂದರ ನಾಯಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಯಾರ್ಯಾರಿಗೆ ಹಣ ನೀಡಲಾಗಿದೆ ಎಂಬುದನ್ನು ಬಾಯ್ಬಿಟ್ಟಿದ್ದ..

ಇದೇ ವೇಳೆ ಎಸ್‌ಎಸ್‌ಐ ಖಾಜಾಬಾಬು ಅವರ ಸಂಬಂಧಿಕರಿಗೆ 5 ಸಾವಿರ ರೂಪಾಯಿ ಹಣ ನೀಡಿದ್ದೇನೆ ಎಂದು ಹೇಳಿದ್ದ.  ಪೊಲೀಸರು ಖಾಜಾಬಾಬು ಸಂಬಂಧಿಕರನ್ನು ವಿಚಾರಣೆಗೊಳಪಡಿಸಿದಾಗ ಅದು ನಿಜವೆಂದು ತಿಳಿದುಬಂದಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ  ಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಕಾಶಂ ಜಿಲ್ಲಾ ಪೊಲೀಸ್ ಅಧಿಕಾರಿಗಳು ಗುಂಟೂರು ರೇಂಜ್ ಐಜಿ ಸರ್ವಶ್ರೇಷ್ಠ ತ್ರಿಪಾಠಿ ಅವರಿಗೆ ವರದಿ ಕಳುಹಿಸಿದ್ದರು.. ಇದರ ಆಧಾರದ ಮೇಲೆ ಎಸ್ಸೈ ಖಾಜಾಬಾಬು ಅವರನ್ನು ಅಮಾನತುಗೊಳಿಸಿ ಐಜಿ ಆದೇಶ ಹೊರಡಿಸಿದ್ದಾರೆ.

Share Post