ಹೆರಿಗೆ ವೇಳೆ ಮಹಿಳೆ ದೇಹದಲ್ಲೇ ಬಟ್ಟೆ ಬಿಟ್ಟ ವೈದ್ಯರು!; ಕೋಲಾರ ವೈದ್ಯರ ದಿವ್ಯ ನಿರ್ಲಕ್ಷ್ಯ
ಕೋಲಾರ; ಹೆರಿಗೆ ವೇಳೆ ವೈದ್ಯರು ಮಾಡಿದ ಎಡವಟ್ಟನಿಂದ ಮಹಿಳೆ ಸಂಕಷ್ಟ ಅನುಭವಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.. ಕೋಲಾರ ನಗರದ ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯದಿಂದ ಈ ಅನಾಹುತ ನಡೆದಿದೆ..
ಮಾಲೂರು ತಾಲ್ಲೂಕಿನ ರಾಮಸಾಗರದ ಚಂದ್ರಿಕಾ ಎಂಬ ಮಹಿಳೆ ಹೆರಿಗೆಗೆಂದು ಮೇ 5 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.. ಹೆರಿಗೆ ವೇಳೆ ರಕ್ತಸ್ರಾವವಾಗಿದ್ದು, ಇದರ ತಡೆಗೆ ಆಕೆಯ ದೇಹದಲ್ಲಿ ಡ್ರೆಸ್ಸಿಂಗ್ ಬ್ಯಾಂಡೇಜ್ ಬಟ್ಟೆ ಇಡಲಾಗಿತ್ತು.. ಹೆರಿಗೆ ನಂತರ ಆ ಮೂರು ಮೀಟರ್ನಷ್ಟಿದ್ದ ಬ್ಯಾಂಡೇಜ್ ಬಟ್ಟೆಯನ್ನು ದೇಹದಲ್ಲಿ ಹಾಗೆಯೇ ಬಿಟ್ಟು ಮಹಿಳೆಯನ್ನು ಮನೆಗೆ ಕಳುಹಿಸಿದ್ದಾರೆ.. ಇದರಿಂದಾಗಿ ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ.. ನಾಲ್ಕು ದಿನಗಳ ನಂತರ ನೋವು ಹೆಚ್ಚಾಗಿದ್ದರಿಂದ ಸ್ಥಳೀಯ ನರ್ಸಿಂಗ್ ಹೋಮ್ಗೆ ಮಹಿಳೆಯನ್ನು ದಾಖಲಿಸಲಾಗಿತ್ತು..
ಈ ವೇಳೆ ಅಲ್ಲಿನ ವೈದ್ಯರು ಹೆರಿಗೆ ಸ್ಥಳದಲ್ಲಿ ಆದ ಗಾಯಕ್ಕೆ ಕ್ರೀಮ್ ಹಚ್ಚುವಾಗ ಬ್ಯಾಂಡೇಜ್ ಬಟ್ಟೆ ದೇಹದಲ್ಲೇ ಬಿಟ್ಟಿರುವುದು ಕಂಡು ಬಂದಿದೆ.. ಕೂಡಲೇ ವೈದ್ಯರು ಅದನ್ನು ಹೊರತೆಗೆದಿದ್ದಾರೆ.. ಇದಾದ ಮೇಲೆ ಮಹಿಳೆ ಚೇತರಿಸಿಕೊಂಡಿದ್ದಾರೆ.. ಬಾಣಂತಿಯ ಪತಿ ರಾಜೇಶ್ ಅವರು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಎಸ್.ಎನ್.ವಿಜಯಕುಮಾರ್ ಅವರಿಗೆ ದೂರು ನೀಡಿದ್ದು, ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ..