19ರ ಬಾಲಕನಿಗೆ ಎರಡೆರಡು ಮದುವೆ ಭಾಗ್ಯ; ವಿವಾಹಿತೆ ಜೊತೆ ಸಿಕ್ಕಿಬಿದ್ದಾತನಿಗೆ ಕಂಕಣ
ಪಾಟ್ನಾ; ಬಿಹಾರದ 19 ವರ್ಷದ ಬಾಲಕ, ಬಾಲಕಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ.. ಸಾಲದು ಎಂಬಂತೆ ಆತನಿಗೆ ವಿವಾಹಿತ ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದಳು.. ಆ ಮಹಿಳೆಯ ಮನೆಗೂ ಆಗಾಗ ಹೋಗಿ ಬರುತ್ತಿದ್ದ.. ಒಂದು ದಿನ ರೆಡ್ಹ್ಯಾಂಡಾಗಿ ಗ್ರಾಮಸ್ಥರಿಗೆ ಆ ಮಹಿಳೆ ಮನೆಯಲ್ಲಿ ಆತ ಸಿಕ್ಕಿಬಿದ್ದಿದ್ದಾನೆ.. ಆಗ ಗ್ರಾಮಸ್ಥರು ಇಬ್ಬರನ್ನು ದೇವಸ್ಥಾನಕ್ಕೆ ಕರೆದೊಯ್ದು ಮದುವೆ ಮಾಡಿಸಿದ್ದಾರೆ.. ಹೀಗಿರುವಾಗಲೇ ಮದುವೆಯಾಗಿ 20 ದಿನಕ್ಕೆ ಪ್ರಿಯತಮೆಯ ನೆನಪಾಗಿದೆ.. ಕದ್ದುಮುಚ್ಚಿ ಆಕೆಯ ಮನೆಗೆ ಹೋಗಿದ್ದಾನೆ.. ಈ ವೇಳೆ ಬಾಲಕಿಯ ಮನೆಯವರಿಗೆ ಸಿಕ್ಕಿಬಿದ್ದಿದ್ದಾನೆ.. ಅವರೂ ಕೂಡಾ ಆಕೆಯೊಂದಿಗೆ ಆತನಿಗೆ ಮದುವೆ ಮಾಡಿಸಿದ್ದಾರೆ.., ಹೀಗೆ 20 ದಿನಗಳ ಅಂತರದಲ್ಲಿ 19 ರ ಬಾಲಕನಿಗೆ ಎರಡು ಮದುವೆ ನಡೆದಿದೆ..
ಬಿಹಾರದ ಜಮುಯಿ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. ಅಕ್ಷರ ಎಂಬ ಗ್ರಾಮದ 19 ವರ್ಷದ ವಿನೋದ್ ಕುಮಾರ್ ಎಂಬಾತನೇ ಸಿಕ್ಕಿಬಿದ್ದು ಎರಡು ಮದುವೆಯಾದಾತ.. ಅದೇ ಗ್ರಾಮದಲ್ಲಿ ಡಿಜೆ, ಲೈಟಿಂಗ್ಸ್ ಹಾಕುವ ಕೆಲಸ ಮಾಡುತ್ತಿದ್ದ ಆತ, ಗಿರಿಜಾ ಕುಮಾರಿ ಎಂಬ ಬಾಲಕಿ ಜೊತೆ ಲವ್ ಅಲ್ಲಿ ಬಿದ್ದಿದ್ದ.. ಸಾಲದೆಂಬಂತೆ ಫೇಸ್ಬುಕ್ ನಲ್ಲಿ ವಿವಾಹಿತ ಮಹಿಳೆಯೊಬ್ಬಳನ್ನು ಬುಟ್ಟಿಗೆ ಹಾಕಿಕೊಂಡಿದ್ದ..
ಫೇಸ್ಬುಕ್ನಲ್ಲಿ ಪರಿಚಯವಾದ ಮಹಿಳೆ ವಿವಾಹಿತೆಯಾಗಿದ್ದು, ಆಕೆಗೆ ಒಬ್ಬಳು ಮಗಳೂ ಇದ್ದಾಳೆ.. ಆದರೂ ಕೂಡಾ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.. ಇಬ್ಬರನ್ನೂ ಮೈಂಟೇನ್ ಮಾಡುತ್ತಿದ್ದ ಬಾಲಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ.. ಎರಡೂ ಕಡೆ ಆತನಿಗೆ ಮದುವೆ ಮಾಡಿಸಿದ್ದಾರೆ.. ಆದ್ರೆ ಕಾನೂನು ಪ್ರಕಾರ ಎರಡೂ ಮದುವೆ ಸಲ್ಲೋದಿಲ್ಲ.. ಯಾಕಂದ್ರೆ ಆತ ಅಪ್ರಾಪ್ತ.. ಹೀಗಾಗಿ ಇದು ಕಾನೂನು ವ್ಯಾಪ್ತಿಯಲ್ಲಿ ವಿಚಾರಣೆ ನಡೆಯುವಂತಾಗಿದೆ.