ಅಶ್ಲೀಲ ವಿಡಿಯೋ ವೈರಲ್ ಮಾಡಿದವರನ್ನು ಹಿಡಿಯೋದು ಕಷ್ಟ; ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು; ಹಾಸನ ಅಶ್ಲೀಲ ವಿಡಿಯೋ ವೈರಲ್ ಮಾಡಿದವರನ್ನು ಹಿಡಿಯೋದು ತುಂಬಾನೇ ಕಷ್ಟ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಈ ವಿಡಿಯೋಗಳು 2-3 ತಿಂಗಳ ಹಿಂದೆಯೇ ಬಿಡುಗಡೆಯಾಗಿದ್ದವು ಎಂದೂ ಹೇಳಿದ್ದಾರೆ..
25 ಸಾವಿರ ಪೆನ್ ಡ್ರೈವ್ಗಳನ್ನು ಮಾಡಿ ಹಂಚಿದ್ದಾರೆ ಅಂದ್ರೆ ಉದ್ದೇಶಪೂರ್ವಕವಾಗಿಯೇ ಆಗಿರುತ್ತದೆ. ಮೊದಲು ವಿಡಿಯೋದಲ್ಲಿ ಇರುವ ವ್ಯಕ್ತಿಯ ಬಗ್ಗೆ ನಾವು ಫೋಕಸ್ ಮಾಡಬೇಕಿದೆ.. ಅನಂತರ ವಿಡಿಯೋ ಬಿಟ್ಟವರು ಸಿಕ್ಕೇ ಸಿಗುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.. ವಿಡಿಯೋ ಯಾರೇ ಬಿಡುಗಡೆ ಮಾಡಿದ್ದರೂ ಅದು ತಪ್ಪೇ ಆಗುತ್ತದೆ.. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ..
ಪ್ರಜ್ವಲ್ ರೇವಣ್ಣ ವೀಡಿಯೋ ರಿಲೀಸ್ನಲ್ಲಿ ಬಿಜೆಪಿ ನಾಯಕರ ಕೈವಾಡ ಇದ್ದು, ಬಿಜೆಪಿಯವರೇ ಆದ ವಕೀಲ ದೇವರಾಜೇಗೌಡರೇ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.. ಪ್ರಜ್ವಲ್ ರೇವಣ್ಣ ಹೀನಾಯ ಕೃತ್ಯ ಎಸಗಿದ್ದು, ವೀಡಿಯೋ ಮಾಡಿದ್ದು ಕೂಡಾ ಪ್ರಜ್ವಲ್ ರೇವಣ್ಣನೇ. ವಿಡಿಯೋ ಕದ್ದಿದ್ದು ಡ್ರೈವರ್. ಕದ್ದ ವಿಡಿಯೋ ಕೊಟ್ಟಿದ್ದು ಬಿಜೆಪಿ ನಾಯಕ ದೇವರಾಜೇಗೌಡರಿಗೆ ಎಂದು ಹೇಳಿರುವ ಪ್ರಿಯಾಂಕ್ ಖರ್ಗೆ, ಈ ಪ್ರಕರಣದಲ್ಲಿ ಸಿಎಂ, ಡಿಸಿಎಂ ಪಾತ್ರ ಇಲ್ಲವೇ ಇಲ್ಲ ಎಂದಿದ್ದಾರೆ.