CrimeNational

ರಸ್ತೆ ಬದಿಯಲ್ಲಿ ಬಿದ್ದಿತ್ತು ಬ್ಯಾಗ್‌; ಬೈಕ್‌ ನಿಲ್ಲಿಸಿ ತೆಗೆದು ನೋಡಿದ ಯುವಕನಿಗೆ ಶಾಕ್‌!

ಗಂಜಾಂ; ರಸ್ತೆ ಬದಿಯಲ್ಲಿ ಬಿದ್ದಿದ್ದ ಬ್ಯಾಗ್‌ ಅನ್ನು ಬೈಕ್‌ ನಲ್ಲಿ ಹೋಗುತ್ತಿದ್ದ ಯುವಕನ ಕಣ್ಣಿಗೆ ಬಿದ್ದಿದೆ.. ಕುತೂಹಲದಿಂದ ಆ ಯುವಕ ಬ್ಯಾಗ್‌ ತೆಗೆದು ನೋಡಿದ್ದಾರೆ.. ಜಿಪ್‌ ತೆಗೆಯುತ್ತಿದ್ದಂತೆ ಆತನಿಗೆ ಶಾಕ್‌ ಆಗಿದೆ.. ಯಾಕಂದ್ರೆ ಬ್ಯಾಗ್‌ನಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿವೆ.. ಬೇರೆ ಯಾರಾದರೂ ಆಗಿದ್ದರೆ ಆ ಹಣವನ್ನು ಯಾರಿಗೂ ತಿಳಿಯದಂತೆ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು.. ಆದ್ರೆ ಆ ಯುವಕ ಮಾತ್ರ ಪ್ರಾಮಾಣಿಕತೆ ಮರೆದಿದ್ದಾನೆ..

ಒಡಿಶಾದ ಗಡಿ ಭಾಗದಲ್ಲಿರುವ ಗಂಜಾಂ ಜಿಲ್ಲೆಯ ಕಲ್ಲಿಕೋಟಾ ಸಮಿತಿಯ ಮಧುರದ ಯುವಕ ಸೂರಜ್‌ ಎಂಬ ಯುವಕ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ.. ನಿರ್ಮಲಝರಕ್ಕೆ ಹೋಗುತ್ತಿರುವಾಗ ಬ್ಯಾಗ್‌ ಕಾಣಿಸಿದೆ.. ಬೈಕ್‌ ನಿಲ್ಲಿಸಿ ಕುತೂಹಲದಿಂದ ಅದನ್ನು ತೆಗೆದು ನೋಡಿದ್ದಾನೆ.. ಈ ವೇಳೆ ಅದರಲ್ಲಿ ಔಷಧಿಗಳು, ಹಲವು ದಾಖಲೆಗಳು ಹಾಗೂ ಕಂತೆ ಕಂತೆ ನೋಟುಗಳು ಸಿಕ್ಕಿವೆ.. ಸುಮಾರು 90 ಸಾವಿರ ರೂಪಾಯಿಯಷ್ಟು ಹಣ ಅದರಲ್ಲಿತ್ತು..

ಅದನ್ನು ನೋಡುತ್ತಲೇ ಸೂರಜ್‌ ಪೊಲೀಸರಿಗೆ ಕರೆ ಮಾಡಿದ್ದಾನೆ.. ಪೊಲೀಸರ ಸಹಾಯದೊಂದಿಗೆ ಹಣ ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಲಾಗಿದೆ.. ಬ್ಯಾಗಿನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಅದು ಆಂದ್ರದ ವೈಜಾಗ್​​ನ ಮೆಡಿಕಲ್​ ರೆಪ್ರೆಸೆಂಟೇಟೀವ್​​ಗೆ ಸೇರಿದ್ದು ಎಂದು ತಿಳಿದುಬಂದಿದೆ.. ಕೂಡಲೇ ಆ ವ್ಯಕ್ತಿಗೆ ಕರೆ ಮಾಡಿ ಮಾಹಿತಿ ನೀಡಿ ಬ್ಯಾಗ್‌ ಅನ್ನು ಹಣದ ಸಮೇತ ಹಿಂತಿರುಗಿಸಲಾಗಿದೆ..

 

Share Post