CrimeNational

ಯುವತಿ ಮೇಲೆ ತನ್ನ ಪತಿಯಿಂದಲೇ ಅತ್ಯಾಚಾರ ಮಾಡಿಸಿದ ಮತ್ತೊಬ್ಬ ಮಹಿಳೆ!

  ಸುಲಿಗೆ ಮಾಡುವ ಸಲುವಾಗಿಯೇ ಮಹಿಳೆಯೊಬ್ಬರಿಗೆ ಮತ್ತು ಬರುವ ಪಾನೀಯ ನೀಡಿ ಮಹಿಳೆಯೊಬ್ಬಳು ತನ್ನ ಪತಿಯಿಂದ ಆಕೆಯ ಮೇಲೆ ಅತ್ಯಾಚಾರ ಮಾಡಿಸಿದ್ದಾಳೆ.. ಅದರ ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾಳೆ.. ಮಂಬೈ ಪೊಲೀಸರು ಈ ಪ್ರಕರಣ ಸಂಬಂಧ 36 ವರ್ಷದ ಮಹಿಳೆಯೊಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.. ಅತ್ಯಾಚಾರ ಎಸಗಿದ ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ತೀವ್ರು ಹುಡುಕಾಟ ನಡೆಯುತ್ತಿದೆ..

ಇದನ್ನೂ ಓದಿ;  10ರೊಳಗೆ ಬೆಂಗಳೂರಿಗೆ ಬರ್ತಾರೆ ಪ್ರಜ್ವಲ್‌!; ವಕೀಲರ ಸಲಹೆಯಂತೆ ವಿಚಾರಣೆಗೆ ಹಾಜರ್

   22 ವರ್ಷದ ಯುವತಿ ಈ ಬಗ್ಗೆ ಪೊಲೀಸರಿಗ ದೂರು ನೀಡಿದ್ದು, ನನಗೆ ಮತ್ತು ಬರುವ ಪಾನೀಯ ನೀಡಿ ಅತ್ಯಾಚಾರ ಎಸಗಲಾಗಿದೆ.. ಅದನ್ನು ಚಿತ್ರೀಕರಿಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.. ಆರೋಪಿ ಮಹಿಳೆ ಬ್ಯೂಟಿಷಿಯನ್‌ ಆಗಿದ್ದು, ಈ ಕೃತ್ಯಕ್ಕೆ ತನ್ನ ಗಂಡನನ್ನೇ ಬಳಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ..

ಇದನ್ನೂ ಓದಿ; ಸಾಲದ‌ ಕಂತು ಕಟ್ಟದ ಗಂಡ; ಪತ್ನಿಯನ್ನು ಕರೆದೊಯ್ದ ಬ್ಯಾಂಕ್ ಸಿಬ್ಬಂದಿ

   ಆರೋಪಿ ಮಹಿಳೆ ಸಂತ್ರಸ್ತ ಮಹಿಳೆಗೆ ಪರಿಚಯವಿತ್ತು.. ಇವೆಂಟ್‌ ಮ್ಯಾನೇಜ್‌ಮೆಂಟ್‌ ಕೆಲಸ ಮಾಡುವ ಸಂತ್ರಸ್ತ ಯುವತಿಗೆ ಬ್ಯೂಟಿಷಿಯನ್‌ ಕರೆ ಮಾಡಿ ಮಾಲ್ವಾನಿಯಲ್ಲಿರುವ ತನ್ನ ನಿವಾಸಕ್ಕೆ ಕರೆಸಿಕೊಂಡಿದ್ದಳು.. ಈ ವೇಳೆ ಈ ಕೃತ್ಯ ಎಸಗಲಾಗಿದೆ ಏಂದು ಆರೋಪಿಸಲಾಗಿದೆ.. ವಿಡಿಯೋ ಚಿತ್ರೀಕರಣ ಮಾಡಿಕೊಂಡು 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.. ಇದನ್ನು ಕೊಡದಿದ್ದಕ್ಕೆ ವಿಡಿಯೋ ಬಿಡುಗಡೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾಳೆ..

ಇದನ್ನೂ ಓದಿ; ಹುಡುಗಿಯೊಂದಿಗೆ ಓಡಿ ಹೋದ ಮಗ; ತಾಯಿಗೆ ಕಂಬಕ್ಕೆ ಕಟ್ಟಿ ಥಳಿತ

Share Post