CrimePolitics

3 ಉಪ ತಂಡಗಳಾಗಿ ಪ್ರಜ್ವಲ್‌ ಪ್ರಕರಣದ ತನಿಖೆ; ಹೇಗಿರುತ್ತೆ ಎಸ್‌ಐಟಿ ಇನ್ವೆಸ್ಟಿಗೇಷನ್‌..?

ಬೆಂಗಳೂರು; ಹಾಸನ ಪೆನ್‌ಡ್ರೈವ್‌ ಪ್ರಕರಣದ ತನಿಖೆ ಚುರುಕುಗೊಂಡಿದೆ.. ಎಸ್‌ಐಟಿ ಅಧಿಕಾರಿಗಳು ವಿವಿಧ ಹಂತಗಳಲ್ಲಿ ತನಿಖೆ ಶುರು ಮಾಡಿದ್ದಾರೆ.. ಈಗಾಗಲೇ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ರೇವಣ್ಣ ಅವರಿಗೆ ನೋಟಿಸ್‌ ನೀಡಿದ್ದಾರೆ.. ಈ ಬೆನ್ನಲ್ಲೇ ಪ್ರಕರಣವನ್ನು ಮೂರು ಹಂತಗಳಲ್ಲಿ ತನಿಖೆ ನಡೆಸಲಾಗಿದ್ದು, ಅದಕ್ಕಾಗಿ ಮೂರು ಉಪ ತಂಡಗಳನ್ನು ಮಾಡಲಾಗಿದೆ..

ಇದನ್ನೂ ಓದಿ; ಅಶ್ಲೀಲ ವಿಡಿಯೋ ಪ್ರಕರಣ; ಇಂದು ರೇವಣ್ಣ ಮನೆಯಲ್ಲಿ ಸ್ಥಳ ಮಹಜರು!

ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.. ಈ ಎಸ್‌ಐಟಿ ತಂಡದಲ್ಲಿ 18 ಅಧಿಕಾರಿಗಳಿದ್ದಾರೆ.. ಈ 18 ಅಧಿಕಾರಿಗಳೂ ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಲಿದ್ದಾರೆ.. ವಿಡಿಯೋಗಳು ಅಸಲಿಯಾ..? ನಕಲಿಯಾ..?, ವಿಡಿಯೋ ರಿಲೀಸ್‌ ಮಾಡಿದವರು ಯಾರು..? ಸಂತ್ರಸ್ತೆ ಹೇಳುತ್ತಿರುವುದರಲ್ಲಿ ಸತ್ಯ ಎಷ್ಟಿದೆ, ಸುಳ್ಳು ಎಷ್ಟಿದೆ..? ಮುಂತಾದ ವಿಚಾರಗಳ ಬಗ್ಗೆ ತನಿಖೆ ನಡೆಯಲಿದೆ.. ಇದಕ್ಕಾಗಿ ತನಿಖಾಧಿಕಾರಿಗಳನ್ನು ಮೂರು ಉಪತಂಡಗಳಾಗಿ ವಿಂಗಡಣೆ ಮಾಡಲಾಗಿದೆ..

ಇದನ್ನೂ ಓದಿ; ನಡು ರಸ್ತೆಯಲ್ಲೇ ಯುವತಿಯರ ಬಡಿದಾಟ; ವಿಡಿಯೋಗಳಿವೆ!

ಎಸ್‌ಪಿ ಸುಮನ್ ಡಿ ಪನ್ನೆಕರ್ ನೇತೃತ್ವದಲ್ಲಿ ಒಂದು ತಂಡ ತನಿಖೆ ನಡೆಸುತ್ತಿದೆ.. ಈ ತಂಡ ಹೊಳೆ ನರಸೀಪುರ ಪೊಲೀಸ್‌ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.. ರೇವಣ್ಣ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆ ಈ ದೂರು ನೀಡಿದ್ದಾರೆ.. ಈ ಪ್ರಕರಣದ ಬಗ್ಗೆ ಈ ತಂಡ ತನಿಖೆ ನಡೆಸಲಿದೆ.. ದೂರುದಾರ ಮಹಿಳೆಯ ಹಿನ್ನೆಲೆ, ಮಹಿಳೆಯ ಮೇಲೆ ಯಾವಾಗ, ಎಲ್ಲಿ ದೌರ್ಜನ್ಯ ನಡೆಸಲಾಗಿದೆ ಎಂಬುದರ ಕುರಿತು ತನಿಖೆ ನಡೆಯಲಿದೆ..

ಇದನ್ನೂ ಓದಿ; ನಡು ರಸ್ತೆಯಲ್ಲೇ ಯುವತಿಯರ ಬಡಿದಾಟ; ವಿಡಿಯೋಗಳಿವೆ!

ಇನ್ನು ಎರಡನೇ ತಂಡ ಎಸ್‌ಪಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಕೆಲಸ ಮಾಡಲಿದೆ.. ಇದರಲ್ಲಿ ಪ್ರಜ್ವಲ್‌ ವಿಡಿಯೋಗಳ ವಿಚಾರವಾಗಿ ತನಿಖೆ ನಡೆಸಲಾಗುತ್ತದೆ.. ವಿಡಿಯೋದಲ್ಲಿರುವ ಮಹಿಳೆಯರ ವಿಚಾರಣೆ ನಡೆಸಲಾಗುತ್ತಿದೆ.. ಜೊತೆಗೆ ವಿಡಿಯೋಗಳಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರನ್ನು ಕರೆಸಿ ಮಾಹಿತಿ ಪಡೆಯಲಾಗುತ್ತಿದೆ.. ಹಾಸನದಲ್ಲೇ ಇರುವ ಈ ತಂಡ ಮಹಿಳೆಯರನ್ನು ಕರೆಸಿ ಮಾಹಿತಿ ಸಂಗ್ರಹ ಮಾಡುತ್ತಿದೆ..

ಇನ್ನು ಮೂರನೇ ಟೀಂ ನಲ್ಲಿ ಸೈಬರ್‌ ಕ್ರೈಂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ..  ಎಸಿಪಿಗಳ ನೇತೃತ್ವದ ಈ ತಂಡ ಹಾಸನದಲ್ಲಿ ಪೆನ್‌ಡ್ರೈವ್‌ ರಿಲೀಸ್‌ ಮಾಡಿದ್ದು ಯಾರು..? ಅವುಗಳನ್ನು ಹಂಚಿಕೆ ಮಾಡಿದ್ದು ಯಾರು..? ಪೆನ್‌ಡ್ರೈವ್‌ ಗೆ ವಿಡಿಯೋ ಕಾಪಿ ಮಾಡಿಕೊಂಡಿದ್ದು ಹೇಗೆ..? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ..

 

Share Post