CrimeNational

ತಂಗಿಯ ಗಂಡನನ್ನು ಬಡಿದು ಕೊಂದ ಅಣ್ಣ-ತಮ್ಮ!

ಹರಿಯಾಣ; ತಂಗಿಯ ಗಂಡನನ್ನು ಅಣ್ಣ-ತಮ್ಮನೇ ಚೆನ್ನಾಗಿ ಥಳಿಸಿ ಕೊಂದಿರುವ ಘಟನೆ ನಡೆದಿದೆ.. ಹರಿಯಾಣದ ಯಮುನಾ ನಗರದಲ್ಲಿ ಈ ಘಟನೆ ನಡೆದಿದ್ದು, ಅಭಿಷೇಕ್‌ ಎಂಬಾತ ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ..

ಯಮುನಾ ನಗರದ ರಿಶು ಎಂಬಾಕೆ ಅಭಿಷೇಕ್‌ನನ್ನು ಪ್ರೀತಿಸುತ್ತಿದ್ದಳು.. ಆದ್ರೆ ಇವರ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ.. ಹೀಗಾಗಿ ಓಡಿಹೋಗಿ ಮದುವೆಯಾಗಿದ್ದರು.. ಪಂಜಾಬ್‌ನ ಝೀರ್ಕ್‌ಪುರದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರೂ ವಾಸವಿದ್ದರು.. ಒಂದು ವರ್ಷದಿಂದ ಇಬ್ಬರೂ ಸುಖವಾಗಿಯೇ ಸಂಸಾರ ನಡೆಸುತ್ತಿದ್ದರು.. ಆದ್ರೆ ಒಂದು ವರ್ಷವಾದರೂ ರಿಶು ಸಹೋರರ ಕೋಪ ತಣ್ಣಗಾಗಿರಲಿಲ್ಲ..

ಇನ್ನು ಯಮುನಾನಗರದಲ್ಲಿ ಸಂಬಂಧಿಕರೊಬ್ಬರ ಮದುವೆ ಇತ್ತು.. ಅದಕ್ಕಾಗಿ ಅಭಿಷೇಕ್‌ ಯಮುನಾನಗರಕ್ಕೆ ಬರುತ್ತಿರುವುದು ರಿಶು ಸಹೋದರರಿಗೆ ಗೊತ್ತಾಗಿತ್ತು.. ಇಬ್ಬರು ಸ್ನೇಹಿತರೊಂದಿಗೆ ಬಂದಿದ್ದ ಅಭಿಷೇಕ್‌ನನ್ನು ಹಿಡಿದ ರಿಶು ಸಹೋದರರು ಚೆನ್ನಾಗಿ ಥಳಿಸಿ ಕೊಲೆ ಮಾಡಿದ್ದಾರೆ..

ಈ ವೇಳೆ ಅಡ್ಡಬಂದ ಇಬ್ಬರು ಸ್ನೇಹಿತರನ್ನೂ ಚೆನ್ನಾಗಿ ಥಳಿಸಲಾಗಿದೆ.. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..

 

Share Post