Technology

ಪಿನಾಕಾ-ಇಆರ್‌ ರಾಕೆಟ್ ಲಾಂಚರ್‌ ಯಶಸ್ವಿ ಪ್ರಯೋಗ

ರಾಜಸ್ಥಾನ್:‌ ಭಾರತ ಸೇನೆಯಲ್ಲಿ ದಶಕದಿಂದ ಬಳಕೆಯಲ್ಲಿರುವ ಪಿನಾಕಾ-ಇಆರ್‌ ರಾಕೆಟ್‌ ಲಾಂಚಿಂಗ್‌ ಯಶಸ್ವಿಯಾಗಿದೆ. ಪಿನಾಕಾ-ಇಆರ್‌ ರಾಕೆಟ್‌ ಸಿಸ್ಟಮ್‌ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಡಿಆರ್‌ಡಿಒ ಸಂಸ್ಥೆ ಕಾರ್ಯನಿರತವಾಗಿತ್ತು. ಇಂದು ರಾಜಸ್ತಾನ ಪೋಕ್ರಾನ್‌ನಲ್ಲಿ ಎಕ್ಸೆಂಟೆಡೆಡ್‌ ಮಲ್ಟಿ ಬ್ಯಾರೆಲ್‌ ರಾಕೆಟ್‌ ಸಿಸ್ಟಮ್‌ ಲಾಂಚ್‌ ಮಾಡುವಲ್ಲಿ ಡಿಆರ್‌ಡಿಒ ಯಶಸ್ವಿಯಾಗಿದೆ. ಈ ಪಿನಾಕಾ ರಾಕೆಟ್‌ ಹಲವು ದಶಕಗಳಿಂದ ಭಾರತ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಪ್‌ಗ್ರೇಡ್‌ ವರ್ಷನ್‌ ಎಂದು DRDO ಸಂಸ್ಥೆ ಹೇಳಿದೆ. ಪುಣೆಯಲ್ಲಿರುವ High energy materials research laboratory(HEMRL)ಯು ಒಂದು ಖಾಸಗಿ ಕಂಪನಿಯೊಂದಿಗೆ ಸೇರಿ ರಾಕೆಟ್‌ಅನ್ನು ಅಭಿವೃದ್ಧಿ ಪಡಿಸಿದೆ. ಅವಶ್ಯಕತೆಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನದಿಂದ ಪಿನಾಕಾ-ಇಆರ್‌ ಅನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಪಿನಾಕಾ-ಎಂಕೆಐ ರಾಕೆಟ್‌ ಯಾವುದೇ ವಸ್ತುವನ್ನು ಸುಮಾರು 40ಕಿ.ಮೀ ದೂರದಿಂದಲೇ ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ಪಿನಾಕಾ-2ವೇರಿಯಂಟ್‌ ರಾಕೆಟ್‌ 60ಕಿ.ಮೀ.ದೂರದಿಂದಲೇ ಮುಂದಿರುವ ಟಾರ್ಗೆಟ್‌ ಅನ್ನು ಕಂಡು ಹಿಡಿಯುತ್ತದೆ.

Share Post