ಪಾಕಿಸ್ತಾನದಲ್ಲಿ ರಣಭೀಕರ ಮಳೆ; 63 ಮಂದಿ ಸಾವು, 100 ಜನ ನಾಪತ್ತೆ!
ನಾವು ಮಳೆ ಬರಲಿ ಎಂದರೂ ಬರುತ್ತಿಲ್ಲ.. ಆದ್ರೆ ಕೆಲ ದೇಶಗಳಲ್ಲಿ ಮಳೆ ಆರ್ಭಟಕ್ಕೆ ಅಲ್ಲಿನ ಜನ ನಲುಗಿಹೋಗಿದ್ದಾರೆ.. ಅದರಲ್ಲೂ ಪಾಕಿಸ್ತಾನದಲ್ಲಿ ಕಳೆದ ನಾಲ್ಕು ದಿನಗಳಿಂದ ರಣಭೀಕರ ಮಳೆ ಸುರಿಯುತ್ತಿದೆ.. ಇದರಿಂದಾಗಿ ತಗ್ಗುಪ್ರದೇಶಗಳಲ್ಲೇ ಮುಳುಗಿಹೋಗಿವೆ.. ನೂರಾರು ಮನೆಗಳು ನೆಲಕ್ಕುರುಳಿವೆ… ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ಒಟ್ಟು 63 ಮಂದಿ ಸಾವನ್ನಪ್ಪಿದ್ದಾರೆ.. 100 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ..
ಇದನ್ನೂ ಓದಿ; ಮತದಾನ ಮಾಡಿ ಪ್ರಾಣ ಬಿಟ್ಟ 83ರ ಅಜ್ಜಿ!
ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಮಳೆಯಿಂದಾಗಿ ಹೆಚ್ಚು ಹಾನಿ ಸಂಭವಿಸಿದೆ.. ರಸ್ತೆಗಳೆಲ್ಲಾ ಕೊಚ್ಚಿಹೋಗಿವೆ.. ಮರ-ಗಿಡಗಳು ಉರುಳಿಬಿದ್ದಿವೆ.. ಹಲವಾರು ಮನೆಗಳು ಕೂಡಾ ಕುಸಿದುಬಿದ್ದಿದೆ.. ಇದರಿಂದಾಗಿ ಈ ಭಾಗದಲ್ಲಿ ಹೆಚ್ಚು ಸಾವುಗಳು ಸಂಭವಿಸಿದೆ.. ಜೊತೆಗೆ ಈ ಭಾಗದಲ್ಲೇ ಹೆಚ್ಚು ಜನರು ನಾಪತ್ತೆಯಾಗಿದ್ದಾನೆ.. ಹೆಚ್ಚು ಜನರು ನೀರಿನಲ್ಲಿ ಕೊಚ್ಚಿಹೋಗಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ; ವೋಟ್ ಕೊಟ್ರೆ ನೀರು, ಹಕ್ಕುಪತ್ರ ಎಂದ ಡಿಕೆಶಿ; ಕೊತ್ವಾಲ್ ಬ್ರದರ್ ಗೂಂಡಾಗಿರಿ ಎಂದ ಬಿಜೆಪಿ!
ಮನೆಗಳು ನೆಲಕ್ಕುರುಳಿದ್ದರಿಂದ ಅದರ ಅವಶೇಷಗಳಡಿ ಸಿಲುಕಿ 32 ಮಂದಿ ಸಾವನ್ನಪ್ಪಿದ್ದಾರೆ.. ಜೊತೆಗೆ ಭಾರೀ ಮಳೆ, ಗುಡುಗು, ಮಿಂಚಿಗೆ ಸಿಲುಕಿ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.. ಇದರಲ್ಲಿ 5 ಮಹಿಳೆಯರು ಹಾಗೂ 15 ಮಕ್ಕಳು ಕೂಡಾ ಸೇರಿದ್ದಾರೆ.. ಬಲೂಚಿಸ್ತಾನ್ದಲ್ಲಿ 10 ಮಂದಿ ಸಾವನ್ನಪ್ಪಿದ್ದು, ಒಟ್ಟು 1,370 ಮನೆಗಳಿಗೆ ತೀವ್ರ ಹಾನಿ ಆಗಿದೆ.
ಇದನ್ನೂ ಓದಿ; ಆಯೋಧ್ಯೆ ರಾಮಲಲ್ಲಾ ಹಣೆಗೆ ಸ್ಪರ್ಶಿಸಿದ ಸೂರ್ಯ ರಶ್ಮಿ