ಕಿತ್ತೂರು ಬಳಿ ರಾಜಹಂಸ ಬಸ್ ಪಲ್ಟಿ; ಕಾರಣ ಏನು ಗೊತ್ತಾ..?
ಬೆಳಗಾವಿ; ಬೆಳಗಾವಿ ಜಿಲ್ಲೆ ಕಿತ್ತೂರು ಬಳಿಯ ತಿಮ್ಮಾಪುರ ಗ್ರಾಮದ ಬಳಿ ರಾಜಹಂಸ ಬಸ್ಸೊಂದು ಉರುಳಿಬಿದ್ದಿದೆ.. ರಸ್ತೆಯಲ್ಲೇ ಬಸ್ ಪಲ್ಟಿ ಹೊಡೆದಿದ್ದರಿಂದ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಗಿತ್ತು.. ಆದ್ರೆ ಬಸ್ನಲ್ಲಿದ್ದವರ ಅದೃಷ್ಟ ಚೆನ್ನಾಗಿತ್ತು.. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಇದನ್ನೂ ಓದಿ; ಸಚಿವನ ಅತ್ಯಾಪ್ತನ ಮನೆಯಲ್ಲಿ 18 ಕೋಟಿ ರೂ. ಪತ್ತೆ!; ಏನೋ ಹುಡುಕಲು ಹೋದಾಗ..
ರಾಜಹಂಸ ಬಸ್ ಹುಬ್ಬಳ್ಳಿಯಿಂದ ಬೆಳಗಾವಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.. ಬಸ್ ಅತಿವೇಗದಲ್ಲಿತ್ತು.. ಇದೇ ವೇಳೆ ಬ್ರೇಕ್ ಫೇಲ್ ಆಗಿದೆ.. ಹೀಗಾಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ.. ಮೊದಲಿಗೆ ಬ್ಯಾರಿಕೇಡ್ಗೆ ಗುದ್ದಿದ ಬಸ್ ಅಲ್ಲೇ ಸರ್ವೀಸ್ ರಸ್ತೆಯಲ್ಲಿ ಪಲ್ಟಿಯಾಗಿದೆ..
ಬಸ್ನಲ್ಲಿ 30 ಪ್ರಯಾಣಿಕರಿದ್ದರು, ಇದರಲ್ಲಿ ಹತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ; ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು