Bengaluru

ಇಂದು ಬೆಂಗಳೂರಲ್ಲಿ ಅಬ್ಬರಿಸುತ್ತ ಮಳೆ; ಹವಾಮಾನ ಇಲಾಖೆ ಹೇಳಿದ್ದೇನು..?

ಬೆಂಗಳೂರು; ಬೆಂಗಳೂರಿನಲ್ಲಿ ಇಂದು ಸಂಜೆ ವೇಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.. ಈ ಬಗ್ಗೆ ಹವಾಮಾನ ತಜ್ಞ ಪ್ರಸಾದ್‌ ಅವರು ಮಾಹಿತಿ ನೀಡಿದ್ದು, ಸಂಜೆ ಮಳೆ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.. ಬೆಂಗಳೂರಿನಲ್ಲಿ ವಿಪರೀತ ಬಿಸಿಲಿರುವುದರಿಂದ ಮಳೆರಾಯ ತಂಪೆರೆಯುತ್ತಾನೆಂದು ಜನ ಕಾದು ಕುಳಿತಿದ್ದಾರೆ.

ಇದನ್ನೂ ಓದಿ;ಫ್ಲೈಓವರ್ ನಿಂದ ಹಾರಿ‌ ನವವಿವಾಹಿತ ಆತ್ಮಹತ್ಯೆ

ಗುಡುಗು-ಮಿಂಚಿನ ಮಳೆ ಸಾಧ್ಯತೆ;

ಸಂಜೆ ವೇಳೆ ಬೆಂಗಳೂರಿನಾದ್ಯಂತ ಗುಡುಗು ಮಿಂಚಿನ ಮಳೆ ಬರುವ ಸಾಧ್ಯತೆ ಇದೆ…ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲೂ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ನಿನ್ನೆಯಿಂದ ಬೆಂಗಳೂರಿನಲ್ಲಿ ತಾಪಮಾನ ಸ್ವಲ್ಪ ಕಡಿಮೆಯಾಗಿದೆ.. ಎರಡು ಡಿಗ್ರಿಯಷ್ಟು ತಾಪಮಾನ ಕಡಿಮೆಯಾಗಿದ್ದು, ಮಳೆ ಬರುವ ಮುನ್ಸೂಚನೆ ನೀಡಿದೆ.

ನಿನ್ನೆ ಬೀದರ್‌, ಕಲಬುರಗಿಯಲ್ಲಿ ಮಳೆ;

ನಿನ್ನೆ ಬೀದರ್​ ಮತ್ತು ಕಲಬುರಗಿಯಲ್ಲಿ 2 ರಿಂದ 3 ಸೆಂಟಿ ಮೀಟರ್​ನಷ್ಟು ಮಳೆಯಾಗಿದೆ. ದಕ್ಷಿಣ ಒಳನಾಡು ಮಡಿಕೇರಿಯಲ್ಲಿ ಸ್ವಲ್ಪ ಮಳೆ ಸುರಿದಿದ್ದು, ಇಂದು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ತಿಳಿದುಬಂದಿದೆ..  ಕಲಬುರಗಿ, ಬೆಳಗಾವಿ ಮತ್ತು ವಿಜಯಪುರದಲ್ಲಿ ಮೋಡ ಮುಸುಕಿದ ವಾತಾವರಣ ಕಂಡುಬರಬಹುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಯುವತಿಯರು ಒಳ ಉಡುಪು ಈ ಬೇಲಿ ಮೇಲೆ ಹಾಕಿದ್ರೆ ಒಳ್ಳೆ ಗಂಡ ಸಿಗ್ತಾನಂತೆ..!

 

Share Post